Breaking News

ಬೆಳಗಾವಿಯಲ್ಲಿ ನವರಾತ್ರಿಯ ನಾಲ್ಕನೇ ದಿನ ಶ್ರೀ ದುರ್ಗಾಮಾತಾದೌಡ್ – ಯುವಜನರಲ್ಲಿ ಧರ್ಮ ರಕ್ಷಣೆಯ ಜಾಗೃತಿ!

Spread the love

ಬೆಳಗಾವಿಯಲ್ಲಿ ನವರಾತ್ರಿಯ ನಾಲ್ಕನೇ ದಿನ ಶ್ರೀ ದುರ್ಗಾಮಾತಾದೌಡ್ – ಯುವಜನರಲ್ಲಿ ಧರ್ಮ ರಕ್ಷಣೆಯ ಜಾಗೃತಿ!
ಬೆಳಗಾವಿಯಲ್ಲಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ವತಿಯಿಂದ ಇಂದು ನವರಾತ್ರಿಯ ನಾಲ್ಕನೇಯ ದಿನ ಶ್ರೀ ಕುಷ್ಮಾಂಡಾದೇವಿಯ ಆರಾಧನೆಯೊಂದಿಗೆ ಶ್ರೀ ದುರ್ಗಾಮಾತಾದೌಡ್ ಆರಂಭಿಸಲಾಯಿತು.
ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ಚೌಕನಿಂದ ಆರಂಭಗೊಂಡ ದೌಡ್ ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ, ಸಾಮ್ರಾಟ್ ಅಶೋಕ ಚೌಕ್, ಬಸವಾಣ್ ಗಲ್ಲಿ ಲಕ್ಷ್ಮೀ ದೇವಾಲಯ, ನರಗುಂದಕರ್ ಭಾವೆ ಚೌಕ, ಗಣಪತ ಗಲ್ಲಿ, ಕಡೋಲ್ಕರ್ ಗಲ್ಲಿ, ಬುರುಡ ಗಲ್ಲಿ, ಭಾತಕಾಂಡೆ ಗಲ್ಲಿ, ಮೆಣಸೆ ಗಲ್ಲಿ, ಆಝಾದ್ ಗಲ್ಲಿ, ಟೆಂಗಿನಕೇರಾ ಗಲ್ಲಿ, ಪಾಂಗುಳ್ ಗಲ್ಲಿ, ಕಾಂದಾ ಮಾರುಕಟ್ಟೆ, , ಕಸಾಯಿ ಗಲ್ಲಿ, ಕಾಮತ್ ಗಲ್ಲಿ, ಪಿ. ಬಿ. ರಸ್ತೆ, ಮಾರ್ಕೇಟ್ ಪೋಲೀಸ್ ಠಾಣೆ, ಶೆಟ್ಟಿ ಗಲ್ಲಿ, ಭಡಕಲ್ ಗಲ್ಲಿಯಲ್ಲಿ ಸಂಚರಿಸಿತು. ಈ ವೇಳೆ ಪ್ರತಿ ಗಲ್ಲಿಯಲ್ಲಿಯೂ ದೌಡನ್ನು ಸ್ವಾಗತಿಸಲಾಯಿತು.
ಕಿರಣ ಗಾವಡೆ ಅವರು ಭಗವಾ ರಕ್ಷಕವನ್ನು ಸ್ಥಾಪಿಸಿ ಮೊದಲೂ ಕ್ರಿಕೆಟ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು. ನಂತರ ಸಂಭಾಜೀ ಭಿಡೇ ಗುರುಜೀಯವರ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ಮಾರ್ಗದರ್ಶನದಲ್ಲಿ ಶ್ರೀ ದುರ್ಗಾಮಾತಾದೌಡ್ ಆರಂಭಿಸಲಾಯಿತು.
ಇದರಲ್ಲಿ ಎಲ್ಲ ಬಹುಜನ ಸಮಾಜ, ಹಿಂದೂ ಸಮಾಜ ಭಾಗಿಯಾಗುತ್ತಾರೆ. ಯುವಕರಲ್ಲಿ ರಾಷ್ಟ್ರಪ್ರೇಮ ಧರ್ಮ ರಕ್ಷಣೆಯ ಜಾಗೃತಿ ಮೂಡಿಸಿ, ಅವರನ್ನು ನಿರ್ವಸನಿಗಳಾಗಲು ಶ್ರೀ ದುರ್ಗಾಮಾತಾದೌಡ್ ಪ್ರೇರೆಪಿಸುತ್ತದೆ ಎಂದು ಸಂಜಯ್ ಭಾತಕಾಂಡೆ ಹೇಳಿದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ