Breaking News

ಗಾನಗಾರುಡಿಗನ ಪ್ರತಿಮೆಯು ಸುಮಾರು 5.8 ಅಡಿ ಎತ್ತರ 339 ತೂಕವಿದ್ದು ಸಂಪೂರ್ಣವಾಗಿ ಚಾಕೋಲೇಟ್‍ನಲ್ಲೇ ತಯಾರಿಸಲಾಗಿದೆ

Spread the love

ಪುದುಚೇರಿ, – ಕ್ರಿಸ್‍ಮಸ್ ಹಾಗೂ ಹೊಸ ವರ್ಷ ಬಂದರೆ ಸಾಕು, ನಾನಾ ರೀತಿಯ ಕೇಕ್‍ಗಳು ತಯಾರಿಸಿ ಅವುಗಳನ್ನು ಕೇಕ್ ಪ್ರದರ್ಶನದಲ್ಲಿಡುವುದು ಸಾಮಾನ್ಯ. ಆದರೆ ಈ ಬಾರಿ ಗಾನಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂರ ಚಾಕೊಲೇಟ್ ಪ್ರತಿಮೆಯನ್ನು ನಿರ್ಮಾಣವಾಗಿರುವುದು ಸೋಜಿಗ.

ತಮ್ಮ ಸುಶ್ರಾವ್ಯ ಕಂಠದಿಂದ 40 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದ ಗಾನಗಾರುಡಿಗ ಎಸ್‍ಪಿಬಿರ ಚಾಕೋಲೇಟ್ ಪ್ರತಿಮೆಯನ್ನು ತಯಾರಿಸುವುದು ಪುದುಚೇರಿಯ ಮಿಷನ್ ಸ್ಟ್ರೀಟ್‍ನಲ್ಲಿರುವ ಚಾಕೋಲೇಟ್ ಅಂಗಡಿಯಲ್ಲಿ

ಎಸ್‍ಪಿಬಿಯ ಚಾಕೋಲೇಟ್ ಪ್ರತಿಮೆಯನ್ನು ಬಾಣಸಿಗ ರಾಜೇಂದ್ರನ್ ಹಾಗೂ ತಂಡ ತಯಾರಿಸಿದ್ದು ಈ ಪ್ರತಿಮೆಯನ್ನು ಜನವರಿ 3ರವರೆಗೂ ಪ್ರದರ್ಶನಕ್ಕೆ ಇಡಲಾಗುವುದು ಎಂದು ಅಂಗಡಿಯ ಮಾಲೀಕರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಾನಗಾರುಡಿಗನ ಪ್ರತಿಮೆಯು ಸುಮಾರು 5.8 ಅಡಿ ಎತ್ತರ 339 ತೂಕವಿದ್ದು ಸಂಪೂರ್ಣವಾಗಿ ಚಾಕೋಲೇಟ್‍ನಲ್ಲೇ ತಯಾರಿಸಲಾಗಿದೆಯಂತೆ.

ಈ ಚಾಕೋಲೇಟ್ ಅಂಗಡಿಯ ಮಾಲೀಕರು ಈ ಹಿಂದೆಯು ಭಾರತದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವರು ಗಣ್ಯರ ಪ್ರತಿಮೆಗಳನ್ನು ಚಾಕೋಲೇಟ್‍ನಲ್ಲಿ ತಯಾರಿಸಿ ಗಮನ ಸೆಳೆದಿದ್ದು, ಈಗ ಎಸ್‍ಪಿಬಿ ಅವರ ಪ್ರತಿಮೆ ಗ್ರಾಹಕರು ಹಾಗೂ ಸಂಗೀತ ಪ್ರೇಮಿಗಳ ಮನರಂಜಿಸುತ್ತಿದೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ