ಕೆ. ಎಲ್. ಈ ಸಂಸ್ಥೆಯ ಶ್ರೀ ಬಿ. ಏಮ್. ಕಂಕನಾವಾಡಿ ಆಯುರ್ವೇದ ಮಹಾವಿದ್ಯಾಲಯ ಶಹಾಪುರ ಬೆಳಗಾವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ 03ರ ವಿಶೇಷ ಶಿಬಿರವನ್ನು ಮಣ್ಣೂರು ಗ್ರಾಮದಲ್ಲಿ ದಿನಾಂಕ 8 – ಸೆಪ್ಟೆಂಬರ್ 2025 ಸೋಮವಾರದಂದು ಉದ್ಘಾಟಿಸಲಾಯಿತು.
ಡಾ. ಸಂದೀಪ ಸಗರೆ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಕಾರ್ಯಕ್ರಮದ ಸ್ವಾಗತ ಭಾಷಣ ಹಾಗೂ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಮುಖ್ಯ ಉದ್ಘಾಟಕರಾಗಿ ಶ್ರೀ ಪಲ್ಲೇದ ರವೀಂದ್ರ ಜಡಿಯಪ್ಪ , ಮಾನ್ಯ ಜಿಲ್ಲಾ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಖಾಯಂ ಜನತಾ ನ್ಯಾಯಾಲಯ , ಬೆಳಗಾವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವೈದ್ಯಕೀಯ ವೃತ್ತಿಯಲ್ಲಿ ಕಾನೂನಿನ ಮಹತ್ವ ಹಾಗೂ ಖಾಯಂ ಜನತಾ ನ್ಯಾಯಾಲಯದ ವಿಶೇಷತೆಗಳು ಮತ್ತು ಅದರ ಸದುಪಯೋಗವನ್ನು ಹೇಗೆ ಪಡೆಯಬೇಕೆಂದು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸುಹಾಸ್ ಕುಮಾರ್ ಶೆಟ್ಟಿ , ಪ್ರಾಂಶುಪಾಲರು, ಶ್ರೀ ಬಿ. ಏಮ್. ಕಂಕನಾವಾಡಿ ಆಯುರ್ವೇದ ಮಹಾವಿದ್ಯಾಲಯ ಶಹಾಪುರ ಬೆಳಗಾವಿ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಸಂದೀಪ್ ಪಾಟೀಲ, ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ
” PLV (Para Leagal Volunteer) ಗಳಾಗಿ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ನೀಡಿದರು.
ಶ್ರೀಮತಿ ಭಾರತಿ
ವಾಲ್ವೇಕಾರ್, ಮಾನ್ಯ ಸದಸ್ಯರು ಖಾಯಂ ಜನತಾ ನ್ಯಾಯಾಲಯ ಮಾತನಾಡುತ್ತಾ” ವಿದ್ಯಾರ್ಥಿಗಳ ಜೀವನದಲ್ಲಿ N.S.Sನ ಪಾತ್ರ ಮತ್ತು ತಮ್ಮ ವಿದ್ಯಾರ್ಥಿ ಜೀವನದ N.S.S ಶಿಬಿರದ ಅನುಭವವನ್ನು ಹಂಚಿಕೊಂಡರು.
ಡಾ. ಪ್ರಶಾಂತ್ ಜಾದರ್, ಉಪ ಪ್ರಾಂಶುಪಾಲರು , ಡಾ. ಸಿದ್ದಿ ಪ್ರಭು ದೇಸಾಯಿ, PDO ಚಿದಾನಂದ ಜಂಬಗಿ, ಮುಕುಂದ ತರಲೆ ದೇವಸ್ಥ ಕಮಿಟಿ ಚೇರ್ಮನ್ನರು, UG ಹಾಗೂ PG ವಿಧ್ಯಾರ್ಥಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ಭೂಮಿಕಾ,ಕುಮಾರಿ ಯೋಗ್ಯ ಶೆಟ್ಟಿ ಮತ್ತು ಕುಮಾರ್ ನಿಖಿಲ್ ಹೂಲಿ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿಕೊಟ್ಟರು.