Breaking News

ಸಚಿವ ಸಂಪುಟ ಪುನರ್ ರಚನೆ ಮಾಡಲು ಹೈಮಾಂಡ್ ಬಹುತೇಕ ಒಪ್ಪಿಗೆ ಇಬ್ಬರು ಪ್ರಮುಖ ಸಚಿವರಿಗೆ ಕೋಕ್?

Spread the love

ನವದೆಹಲಿ: ಬಹಳ ದಿನಗಳಿಂದ ಸಚಿವರಾಗಬೇಕು ಅಂತ ಒಂಟಿ ಕಾಲಿನಲ್ಲಿ ನಿಂತಿದ್ದ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಸಂಕ್ರಾಂತಿ ಹಬ್ಬದ ಬಳಿಕ ಸಚಿವ ಸಂಪುಟ ಪುನರ್ ರಚನೆ ಮಾಡಲು ಹೈಮಾಂಡ್ ಬಹುತೇಕ ಒಪ್ಪಿಗೆ ಸಿಕ್ಕಿದೆ. ಇನ್ನು ವಿಸ್ತರಣೆಗಿಂತ ಪುನರ್ ರಚನೆ ಮಾಡಲಿದ್ದು ಹಾಲಿ ಇಬ್ಬರು ಸಚಿವರಿಗೆ ಕೋಕ್ ನೀಡಲಿದ್ದಾರೆ. ಇನ್ನು ಎಲ್ಲಾ ಸ್ಥಾನಗಳನ್ನು ತುಂಬಲಿದ್ದು, ಈಗಾಗಲೇ ಬಿಎಸ್ ವೈ ಪಟ್ಟಿ ಹೈಕಮಾಂಡ್ ಗೆ ರವಾನಿಸಿದ್ದಾರೆ ಅಂಥ ಉನ್ನತ ಮೂಲಗಳು ತಿಳಿಸಿವೆ.

ಇನ್ನು ಇದೇ ಹೊತ್ತಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದು ಜನವರಿ 15 ಮತ್ತು 16 ರಂದು ಭದ್ರಾವತಿ ಹಾಗು ಹೊಸಪೇಟೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅದೇ ವೇಳೆ ಸಂಪುಟ ವಿಸ್ತರಣೆ ಕುರಿತು ಅಂತಿಮ ಒಪ್ಪಿಗೆ ಸಿಗುವ ಸಾಧ್ಯತೆ ಇದೆ

ಇಬ್ಬರು ಪ್ರಮುಖ ಸಚಿವರಿಗೆ ಕೋಕ್?
: ಇನ್ನು ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚಿಸಿದರು.

ಇನ್ನು ನಮ್ಮ ಜೊತೆ ಬಂದ ಎಲ್ಲರಿಗೂ ಸಚಿವ ಸ್ಥಾನ ಸಿಗುತ್ತೆ ಅಂಥ ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಬಿಎಸ್‌ವೈ ಹಾಗೂ ವರಿಷ್ಠರು ನಿರ್ಣಯ ಕೈಗೊಳ್ಳುತ್ತಾರೆ. ಯೋಗೇಶ್ವರ ಅಷ್ಟೇ ಅಲ್ಲ ನಮ್ಮ ಜೊತೆ ಬಂದ ಎಲ್ಲರಿಗೂ ಸಚಿವ ಸ್ಥಾನ ಸಿಗಲಿ ಎಂದರು

ಇಷ್ಟರ ನಡುವೆ ಬೆಂಗಳೂರು ಮೂಲದ ಶಾಸಕರೊಬ್ಬರಿಗೆ ಸಚಿವ ಸ್ಥಾನ ಸಿಗೋದು ಡೌಟ್ ಅಂಥ ಉನ್ನತ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಯಾದವಾಡದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love *ಅಕ್ರಮ ಸಾರಾಯಿ ಚಟುವಟಿಕೆಯ ಬಗ್ಗೆ ನೀಗಾ ವಹಿಸಿ, ಕಠಿಣ ಕ್ರಮಕ್ಕೆ ಮುಂದಾಗಿ- ಶಾಸಕ ಬಾಲಚಂದ್ರ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ