ನವದೆಹಲಿ, ಡಿ.24- ನ್ಯೂಮೋನಿಯಾಗೆ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೈಗೆಟುಕುವ ಬೆಲೆಯ ಲಸಿಕೆ ಮುಂದಿನ ವಾರದಿಂದ ಜನರಿಗೆ ದೊರೆಯುವ ಸಾಧ್ಯತೆಗಳಿವೆ. ಭಾರತದಲ್ಲೇ ಅಭಿವೃದ್ದಿಪಡಿಸಿರುವ ಲಸಿಕೆಯನ್ನು ಲೋಕಾರ್ಪಣೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮುಂದಿನ ವಾರದಿಂದ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ವಿದೇಶಿ ನಿರ್ಮಿತ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ವಿದೇಶಿ ಲಸಿಕೆಗಳಿಗಿಂತ ಕಡಿಮೆ ದರದಲ್ಲಿ ಸೆರಂ ಸಂಸ್ಥೆಯ ನ್ಯೂಮೋನಿಯಾ ಲಸಿಕೆ ದೊರೆಯಲಿದೆ. ಪೂನಾ ಮೂಲದ ಸೆರಂ ಸಂಸ್ಥೆ ಅಭಿವೃದ್ದಿಪಡಿಸಿರುವ ನ್ಯೂಮೋನಿಯಾ ಲಸಿಕೆ ಈಗಾಗಲೇ ಮೂರು ಹಂತದ ಪರೀಕ್ಷೆಗಳಲ್ಲಿ ಪಾಸಾಗಿದ್ದು, ಲಸಿಕೆ ಮಾರಾಟಕ್ಕೆ ಭಾರತೀಯ ಡ್ರಗ್ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದ್ದು ಮುಂದಿನ ವಾರದಿಂದ ಲಸಿಕೆ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.