ಕಳೆದ ಒಂದು ವರ್ಷದಿಂದ ದಾ ಸಾಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 3 ನೇ ವಾರ್ಡಿನಲ್ಲಿ ರಸ್ತೆಯ ಮೇಲೆ ಚರಂಡಿಯ ನೀರು ಮೊಣಕಾಲು ತನಕ ನಿಂತು ಗಬ್ಬುನಾರುತ್ತಿದೆ. ಇದರಿಂದ ಸೊಳ್ಳೆಗಳು ಹಾಗೂ ಕೀಟನಾಶಕಗಳು ಉತ್ಪತ್ತಿಯಾಗಿ ಸಾರ್ವಜನಿಕರಿಗೆ ಹಲವಾರು ರೋಗಗಳು ಬರುವ ಸಾಧ್ಯತೆ ಇದೆ.
ಈ ಹಿಂದೆ ಸಾರ್ವಜನಿಕರು ಗ್ರಾಮ ಪಂಚಾಯತಿಗೆ ರಸ್ತೆಯ ಮೇಲೆ ನಿಂತ ನೀರನ್ನು ಸರಿಯಾಗಿ ಚರಂಡಿ ಮಾಡಿ ಎಂದು ಗ್ರಾಮ ಪಂಚಾಯತಿ ಯವರಿಗೆ ಹೇಳಿದರೂ ಕೂಡ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ನಿಂತ ನೀರಿನಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಮತ್ತು ಅದೇ ರಸ್ತೆಯಲ್ಲಿ ಅಂಧರ ಮನೆಗಳಿದ್ದು ಆ ಮನೆಯಲ್ಲಿ ಮೂರು ಜನ ಅಂಧರು ವಾಸ ಮಾಡುತ್ತಿದ್ದು ಅದೇ ರಸ್ತೆಯ ಮೇಲೆ ಹೋಗುವಾಗ ಕಾಲು ಜಾರಿ ಬಿದ್ದು ಅನಾಹುತ ಆಗಿದೆ. ಇದರ ಬಗ್ಗೆ ಸ್ವಲ್ಪ ಗಮನಹರಿಸಿ ನಿಂತ ನೀರನ್ನು ಒಂದು ಕಡೆ ಹೋಗುವ ಹಾಗೆ ದಾರಿ ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡರು.
Laxmi News 24×7