Breaking News

ಬೆಳಗಾವಿಯಲ್ಲಿ ಸಂಪತ್ ಶುಕ್ರವಾರದ ಸಂಭ್ರಮ ವರಮಹಾಲಕ್ಷ್ಮಿಗೆ ಉಡಿ ತುಂಬಿದ ಭಕ್ತರು…

Spread the love

ಬೆಳಗಾವಿಯಲ್ಲಿ ಸಂಪತ್ ಶುಕ್ರವಾರದ ಸಂಭ್ರಮ
ವರಮಹಾಲಕ್ಷ್ಮಿಗೆ ಉಡಿ ತುಂಬಿದ ಭಕ್ತರು…
ಬೆಳಗಾವಿ ನಗರ ಮತ್ತು ಪ್ರದೇಶದಲ್ಲಿ ಇಂದು ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮಾಡಿದೆ. ಭಕ್ತರು ಮನೆ ಮನೆಗಳಲ್ಲಿ ಪೂಜೆ ಸಲ್ಲಿಸಿ, ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಹೌದು, ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರಗಳಲ್ಲಿ ಶ್ರೀ ಮಹಾಲಕ್ಷ್ಮೀಯ ವೃತಾಚರಣೆಯನ್ನು ಮಾಡಲಾಗುತ್ತದೆ. ಇದಕ್ಕೆ ಸಂಪತ್ತು ಶುಕ್ರವಾರ ವೃತ ಅಥವಾ ಶುಕ್ರಗೌರಿ ವೃತವೆಂದು ಕರೆಯುತ್ತಾರೆ.
ದೇವಿ ಮಹಾಲಕ್ಷ್ಮೀಗೆ ವಸಂತ ಋತುವಿನಲ್ಲಿ ದೊರೆಯುವ ವಿವಿಧ ಫಲಪುಷ್ಪಗಳಿಂದ ಪೂಜಿಸಿದಾಗ ಆಕೆ ಪ್ರಸನ್ನಳಾಗಿ ಸುಖ ಸಮೃದ್ಧಿಯೊಂದಿಗೆ ಬೇಡಿದ ವರ ನೀಡುವ ವರಮಹಾಲಕ್ಷ್ಮೀಯಾಗಿ ಆರ್ಶಿವಾದ ನೀಡುತ್ತಾಳೆಂದ ಪ್ರತೀತಿ ಇದೆ. ಈ ಹಿನ್ನೆಲೆ ಮನೆಗಳಲ್ಲಿ ದೇವಸ್ಥಾನಗಳಲ್ಲಿ ದೇವಿಯನ್ನು ಪೂಜಿಸಿ ಆಕೆಯ ಅವತಾರವೆಂದೇ ಭಾವಿಸಿ ಸುಮಂಗಲಿಯರಿಗೆ ಅರಿಶಿಣ ಕುಂಕುಮ ನೀಡಿ ಉಡಿ ತುಂಬಲಾಗುತ್ತದೆ.
ಈ ಬಾರಿ 5 ಶ್ರಾವಣ ಶುಕ್ರವಾರಗಳು ಬಂದಿದ್ದು, ಕೇಲವರು ಮೂರನೇ ಶುಕ್ರವಾರವನ್ನು ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತಿದೆ. ಕುಂಕುಮಾರ್ಚಣೆ, ಅಭಿಷೇಕ, ಉಡಿ ತುಂಬುವ ಕಾರ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಸ್ವಚ್ಛ ಪರಿಶುದ್ಧ ಭಕ್ತಿಯನ್ನು ಇಂದು ಲಕ್ಷ್ಮೀ ದೇವಿಯನ್ನು ಇಂದು ಪೂಜಿಸಿದರೇ, ಭಕ್ತರಿಗೆ ಆಕೆ ವರವನ್ನು ನೀಡುತ್ತಾಳೆ. ಆದ್ದರಿಂದಲೇ ಇಂದಿನ ದಿನವನ್ನು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಹೆಚ್ಚಾಗಿ ಸುಮಂಗಲಿಯರು ತಮ್ಮ ಪತಿ ಆರ್ಯೂರಾರೋಗ್ಯ ನೀಡಲಿ, ಸಂಪತ್ತು ಪ್ರಾಪ್ತವಾಗಲಿ ಎಂದು ಆಚರಿಸುತ್ತಾರೆ.
ಬೆಳಗಾವಿ ಕಂಬಳಿಕೂಟದ ಬಸವಾಣ ಗಲ್ಲಿಯಲ್ಲಿರುವ ಬೆಳಗಾವಿಯ ಶ್ರೀ ಮಹಾಲಕ್ಷ್ಮೀ ಮಂದಿರಕ್ಕೆ ಬೆಳಗಾವಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಗೋವಾದ ಭಕ್ತರು ಕೂಡ ಹೆಚ್ಚಿಸ ಸಂಖ್ಯೆಯಲ್ಲಿ ಆಗಮಿಸುತ್ತಾರೆಂದು ಮಂದಿರ ಅರ್ಚಕರಾದ ಮಹಿಮಾ ಕಂಬಾರ್ ಹೇಳಿದರು. ವೇಳೆ ನೂರಾರು ಭಕ್ತರು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಗ್ಯಾರಂಟಿ’ಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ನಿಜ, ಆದರೆ ಅಭಿವೃದ್ಧಿ ಕಾರ್ಯ ನಿಂತಿಲ್ಲ: ಸತೀಶ್ ಜಾರಕಿಹೊಳಿ

Spread the loveಬೆಳಗಾವಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ.ಪಾಟೀಲ್‌ ಅಪಸ್ವರ ಎತ್ತಿದ ಬೆನ್ನಲ್ಲೇ ಲೋಕೋಪಯೋಗಿ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ