Breaking News

4 ಪ್ರಕರಣಗಳಲ್ಲಿ 8 ಆರೋಪಿಗಳ ಬಂಧನ ಗಾಂಜಾ ಮತ್ತು ಜೂಜಾಟ ಪ್ರಕರಣವನ್ನು ಬೇಧಿಸಿದ ಬೆಳಗಾವಿ ಪೊಲೀಸರು…

Spread the love

4 ಪ್ರಕರಣಗಳಲ್ಲಿ 8 ಆರೋಪಿಗಳ ಬಂಧನ
ಗಾಂಜಾ ಮತ್ತು ಜೂಜಾಟ ಪ್ರಕರಣವನ್ನು ಬೇಧಿಸಿದ ಬೆಳಗಾವಿ ಪೊಲೀಸರು…
ಜೂಜಾಟ, ಗಾಂಜಾ ಸೇವನೆ ಮತ್ತು ಹರಿತವಾದ ಆಯುಧ ಹೊಂದಿದ ಒಟ್ಟು 4 ಪ್ರಕರಣಗಳಲ್ಲಿ ಒಟ್ಟು 8 ಜನರನ್ನು ವಶಕ್ಕೆ ಪಡೆದು, ಒಟ್ಟು 9,580 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಹಾಳ ಕ್ರಾಸ್ ಹತ್ತಿರ ಮಟಕಾ ಆಡುತ್ತಿದ್ದಾಗ ಸಿಸಿಬಿ ವಿಭಾಗ ಪಿ ಎಸ್ ಐ ಮಂಜುನಾಥ್ ಭಜಂತ್ರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಅನೀಲ್ ಚೌಗಲೆ ಮತ್ತು ಪ್ರಕಾಶ ಕುರಂಗಿ ಅವರನ್ನು ಬಂಧಿಸಿ 5500 ರೂಪಾಯಿ ಹಣವನ್ನು ವಶಕ್ಕೆ ಪಡೆದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ನಾವಗೆ ಲಕ್ಷ್ಮೀ ನಗರದ ಹತ್ತಿರ ಹಣ ಹಚ್ಚಿ ಜೂಜಾಟವಾಡುತ್ತಿದ್ದಾಗ ಗ್ರಾಮೀಣ ಠಾಣ ಪಿ ಎಸ್ ಐ ಶ್ವೇತಾ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಗಂಗಪ್ಪ ಭಾತಕಾಂಡ, ರಾಜು ಯರಗನ, ಮಂಜುನಾಥ ಗುರವನ್ನವರ, ಲಕ್ಷ್ಮಣ ಉಸೂಲ್ಕರ್ ಮತ್ತು ಆದವಯ್ಯಾ ಹಿರೇಮಠ ಎಂಬುವವರನ್ನು ಬಂಧಿಸಿ ಒಟ್ಟು 4080 ರೂಪಾಪಿ ಹಣ ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬೆಳಗಾವಿಯ ಹಳೇ ಭಾಜಿ ಮಾರ್ಕೇಟ್ ಹತ್ತಿರ ಮಾರ್ಕೇಟ್ ಪಿ ಎಸ್ ಐ ವಿಠ್ಠಲ ಹಾವನ್ನವರ ನೇತೃತ್ವದಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಪರಿಶೀಲನೆ ನಡೆಸುತ್ತಿದ್ದಾಗ ಜುಬೇರ್ ಮೊಕಾಶಿಯ ಬಳಿ ಹರಿತವಾದ ಆಯುಧ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಅದೇ ರೀತಿ ಕೇಂದ್ರ ಬಸ್ ನಿಲ್ದಾಣದ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ತೌಖೀರ್ ನಾಲಬಂಧ ಎಂಬಾತನನ್ನು ಮಾರ್ಕೇಟ್ ಪಿ ಎಸ್ ಐ ಹುಸೇನಸಾಬ್ ಕೇರೂರ ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತ ಗಾಂಜಾ ಸೇವಿಸಿರುವುದು ದೃಢವಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತರು ಮತ್ತು ಉಪಾಯುಕ್ತರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ