ಒಂದೂವರೆ ತಿಂಗಳಲ್ಲೇ ಹಾಳಾದ ರಸ್ತೆ! ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ
ಒಂದೂವರೆ ತಿಂಗಳ ಹಿಂದೆ ಮಾತ್ರ ಡಾಂಬರೀಕರಣಗೊಂಡ ಖಾನಾಪೂರ – ಹಳಿಯಾಳ ರಾಜ್ಯ ಹೆದ್ದಾರಿ ಮಧ್ಯದ ಬೇಕವಾಡ – ಬೀಡಿ ಮಾರ್ಗದ ರಸ್ತೆ ಹಾಳಾಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯ ಮೇಲ್ಭಾಗದಲ್ಲಿ ತೆಗ್ಗುಗಳು ಬಿದ್ದಿದ್ದು, ಹಲವೆಡೆ ಡಾಂಬರ್ ಕಿತ್ತು ಹೋಗಿದೆ. ಇಂತಹ ಕಳಪೆಮಟ್ಟದ ಕಾಮಗಾರಿಯು ಸಾರ್ವಜನಿಕ ಹಣದ ದುರುಪಯೋಗದ ಅನುಮಾನ ಮೂಡಿಸಿದೆ. “ಅಂತಹ ಕೆಲಸ ಮಾಡುವದಕ್ಕಿಂತ ಮಾಡದೇ ಇದ್ದೇ ಒಳಿತು” ಎಂಬ ಜನಮತ ವ್ಯಕ್ತವಾಗುತ್ತಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಖಾನಾಪೂರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಕಳಪೆಮಟ್ಟದ ಕಾಮಗಾರಿಗೆ ಅನುಮತಿ ನೀಡಿದ ಅಧಿಕಾರಿಗಳ ನಿರ್ಲಕ್ಷ್ಯವೂ ಇಲ್ಲಿ ಪ್ರಮುಖ ವಿಷಯವಾಗಿದೆ.ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ್ದು, ಕಾಮಗಾರಿಯನ್ನು ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.