ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಖಾನಾಪೂರ ಘಟಕದ ಅಧ್ಯಕ್ಷರಾಗಿ ಶಿವಾನಂದ ಕುಂದರಗಿ ಆಯ್ಕೆ
ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಖಾನಾಪೂರ ಘಟಕದ ನೂತನ ಅಧ್ಯಕ್ಷರಾಗಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಗಾಂಧಿ ನಗರದ ನಿವೃತ್ತ ಶಿಕ್ಷಕರಾದ ಶಿವಾನಂದ ಕುಂದರಗಿ ಅವರನ್ನು ಆಯ್ಕೆ ಮಾಡಲಾಯಿತು.
ಖಾನಾಪೂರ ಪಟ್ಟಣದ ಸಂತ ಜ್ಞಾನೇಶ್ವರ ಮಂದಿರದಲ್ಲಿ ಖಾನಾಪೂರ ತಾಲೂಕು ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಸಭೆ ಆಯೋಜಿಸಲಾಗಿತ್ತು ಈ ಸಭೆಯನ್ನು ಸಿ.ಎಮ್. ಪವಾರ ಮತ್ತು ವಿ.ಎಂ.ಬನೋಶಿಯವರ ಸೂಚನೆ ಮೇರೆಗೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ ಸಿದ್ನಾಳ ಅವರು ಸಂಘದ ಬೈಲಾ ಪ್ರಕಾರ ಈ ಆಯ್ಕೆ
ಮಾಡಿದರು ಈ ಸಂದರ್ಭದಲ್ಲಿ ನಿವೃತ್ತ ಸರಕಾರಿ ನೌಕರರ ಸಂಘದ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು ಪಟ್ಟಣ ಪಂಚಾಯಿತಿ ಸದಸ್ಯೆ ಮೇಘಾ ಕುಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತಿಯಲ್ಲಿ ಉಳಿದ ಇನ್ನಿತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.