Breaking News

ಮಹಾರಾಷ್ಟ್ರದಲ್ಲಿಮತ್ತೆ ನೈಟ್ ಕರ್ಫ್ಯೂ

Spread the love

ಮುಂಬೈ: ಕೊರೊನಾ ಸೋಂಕು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿನಾಳೆಯಿಂದ ಮತ್ತೆ ನೈಟ್ ಕರ್ಫ್ಯೂ ಘೋಷಣೆ ಮಾಡಲಾಗಿದೆ.

ಮಹಾರಾಷ್ಟ್ರದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್​ ಕರ್ಫ್ಯೂ ಜಾರಿ ಇರಲಿದೆ ಅಂತಾ ಉದ್ಧವ್ ನೇತೃತ್ವದ ಸರ್ಕಾರ ತಿಳಿಸಿದೆ. ನಾಳೆ ರಾತ್ರಿ 11 ಗಂಟೆಯಿಂದ ಜನವರಿ 5 ರವರೆಗೆ ನೈಟ್​ ಕರ್ಫ್ಯೂ ಜಾರಿ ಇರಲಿದೆ.

ಒಂದು ಸಮಯದಲ್ಲಿ ಕೊರೊನಾ ಹಾಟ್​ಸ್ಪಾಟ್​ ಆಗಿ ಮಹಾರಾಷ್ಟ್ರ ಬದಲಾಗಿತ್ತು. ಸದ್ಯ ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇದೀಗ ಇಂಗ್ಲೆಂಡ್​ನಲ್ಲಿ ರೂಪಾಂತರಗೊಂಡಿರುವ ಕೊರೊನಾ ಉಲ್ಬಣಿಸಿದೆ ಅನ್ನೋ ಸುದ್ದಿ ಬರಸಿಡಲಿನಂತೆ ಬಂದಿದೆ. ಜೊತೆಗೆ ಕ್ರಿಸ್​ಮಸ್​ ಹಬ್ಬ, ಹೊಸ ವರ್ಷಾಚರಣೆ, ಸಂಕ್ರಾಂತಿ ಹಬ್ಬ ಜೊತೆ ಜೊತೆಗೆ ಎದುರಾಗಲಿವೆ. ಈ ವೇಳೆ ಕೊರೊನಾ ಸೋಂಕು ಹೆಚ್ಚಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ ಮಾಡಿದೆ


Spread the love

About Laxminews 24x7

Check Also

ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಮನೆ ಊಟಕ್ಕೆ ತಡೆ ನೀಡಿದ ಹೈಕೋರ್ಟ್​

Spread the loveಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್​ಗೆ ವಾರಕ್ಕೊಮ್ಮೆ ಮನೆಯಿಂದ ಊಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ