ಬೆಳಗಾವಿ, ಜುಲೈ 7: ರಾಜ್ಯ ಬಿಜೆಪಿ ಘಟಕದಲ್ಲಿ ಯಾವ ಸಮಸ್ಯೆಗಳೂ ಇಲ್ಲ, ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ, ಸಂಘಟಿತ ಮತ್ತು ಸಾಮೂಹಿಕ ಹೋರಾಟದ ಮೂಲಕ 2028 ರಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ಬಿಜೆಪಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ (Mahesh Kumatalli) ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಭಾರೀ ಜನಬೆಂಬಲ ಇರುವ ನಾಯಕ; ಬೆಳಗಾವಿ, ವಿಜಯಪುರ ಮತ್ತು ಕಲಬುರಗಿಯವರೆಗೆ ಅವರಿಗೆ ಜನಬೆಂಬಲ ಇದೆ, ತಮ್ಮ ಕ್ಷೇತ್ರದಲ್ಲೂ ತನ್ನ ಜೊತೆ ಇರುವ ಜನ ಯತ್ನಾಳ್ರನ್ನು ನೋಡಿದ ಕೂಡಲೇ ಅವರ ಕಡೆ ಓಡುತ್ತಾರೆ ಎಂದು ಕುಮಟಳ್ಳಿ ಹೇಳಿದರು. ಅವರನ್ನು ವಾಪಸ್ಸು ಕರೆಸಿಕೊಳ್ಳದಿದ್ದರೆ ಮುಂದಿನ ಅಸೆಂಬ್ಲಿ ಚುನಾವಣೆ ಪಕ್ಷದ ಪ್ರದರ್ಶನ ಮೇಲೆ ಪರಿಣಾಮ ಬೀರಲಿದೆ ಎಂದು ಕುಮಟಳ್ಳಿ ಹೇಳಿದರು.