ಜನಮನ ಸೇಳೆದ ಭರ್ಜರಿ ತೆರೆಬಂಡಿ ಸ್ಪರ್ಧೆ
ಜಾತ್ರೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುವುದು ಸರ್ವೇ ಸಾಮಾನ್ಯ ಆದರೆ ಜೋಡೆತ್ತುಗಳ ತೆರೆಬಂಡಿ ಸ್ಪರ್ಧೆ ಆಯೋಜಿಸುವುದು ತೀರಾ ವಿರಳ ಅದರಲ್ಲೂ ವಿಜೇತರಿಗೆ ಬಹುಮಾನ ನೀಡುವುದರಲ್ಲಿರುವ ವಿಶೇಷ ಇದೇಯಲ್ಲಾ ಅದು ಮತ್ತಷ್ಟು ವಿಶೇಷವಾಗಿದೆ ಈ ಕುರಿತು ಒಂದು ವರದಿ
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಪಟ್ಟಣದ ಬಸವೇಶ್ವರ ಜಾತ್ರಾ ಕಮೀಟಿ ವತಿಯಿಂದ ಸಾಧುನ ಗುಡಿ ಹತ್ತಿರ ಆಯೋಜಿಸಲಾಗಿದ್ದ ತೆರೆಬಂಡಿ ಸ್ಪರ್ಧೆಯಲ್ಲಿ ಮಹಾಲಿಂಗಪೂರ ರನ್ನ ಬೆಳಗಲಿ ಸೇರಿದಂತೆ ಬೇರೆ ಬೇರೆ ಊರುಗಳಿಂದ ಜೋಡು ಎತ್ತಿನ ತಂಡಗಳು ಭಾಗವಹಿಸಿದ್ದವು.
ನೆರೆದಿದ್ದ ಜನರ ಕೇಕೆಯ ಮಧ್ಯೆ ನಿತ್ಯ ಹೊಲದಲ್ಲಿ ದುಡಿದು ಬರೋ ರೈತರ ಹುರುಪು ಹುಮ್ಮಸ್ಸಿನ ಮಧ್ಯೆ ಸಖತ್ ಆಗಿ ಗಮನ ಸೆಳೆಯಿತು. ವಿಜೇತ ಪ್ರಥಮ, ದ್ವಿತೀಯ, ತೃತೀಯ & ಚತುರ್ಥ ಬಹುಮಾನಗಳೆಲ್ಲ ಹೊಸ ಬೈಕ್ ಗಳಾಗಿದ್ದವು. ವಿಜೇತ ತೆರೆಬಂಡಿ ಸ್ಪರ್ಧೆಗಳು ಬಹುಮಾನ ಪಡೆದು ಕೇಕೆ ಹಾಕಿದರು.