ಬೆಳಗಾವಿ : ಗಡಿ ಸಚಿವರಾಗಿ ಹೆಚ್. ಕೆ. ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ ಅಲರ್ಟ್ ಆಗಿದೆ. ಗಡಿ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿದ್ದು, ಆ ಸಮಿತಿಯಲ್ಲಿ ಬೆಳಗಾವಿಯ ಮೂವರು ಎಂಇಎಸ್ ಮುಖಂಡರಿಗೆ ಸ್ಥಾನ ಕೊಟ್ಟಿರುವ ವಿಚಾರ ಕನ್ನಡಿಗರನ್ನು ಕೆರಳಿಸಿದೆ.
ಮಹಾರಾಷ್ಟ್ರ ಸರ್ಕಾರ ಗಡಿ ತಜ್ಞರ ಸಮಿತಿ ರಚನೆ ಮಾಡಿದ್ದು, ಆ ಸಮಿತಿಗೆ ಕೊಲ್ಹಾಪುರ ಸಂಸದ ಧೈರ್ಯಶೀಲ್ ಮಾನೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಬೆಳಗಾವಿಯ ಮಹೇಶ ಬಿರ್ಜೆ, ದಿನೇಶ ಓವುಳ್ಕರ್ ಮತ್ತು ಮಾಲೋಜಿ ಅಷ್ಟೇಕರ್ ಅವರನ್ನು ಸೇರಿಸಲಾಗಿದೆ. ಈ ಮೂವರು ಎಂಇಎಸ್ ಮುಖಂಡರು.
ಗಡಿ ವಿಚಾರವಾಗಿ ತೀಕ್ಷ್ಣ ಹೆಜ್ಜೆ ಇಡುತ್ತಿರುವ ಮಹಾರಾಷ್ಟ್ರ ಸರ್ಕಾರ ಇತ್ತೀಚಿಗಷ್ಟೇ ಉನ್ನತಾಧಿಕಾರಿಗಳ ಸಮಿತಿಯನ್ನೂ ರಚನೆ ಮಾಡಿತ್ತು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಡಿಸಿಎಂ ಏಕನಾಥ ಶಿಂಧೆ ಸೇರಿದಂತೆ 17 ಜನ ಪ್ರಮುಖರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿತ್ತು. ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ಮಹಾರಾಷ್ಟ್ರ ತಜ್ಞರ ಸಮಿತಿ ರಚಿಸಿರುವುದರಿಂದಾಗಿ ಗಡಿ ವಿವಾದ ಪ್ರಕರಣ ನಿರ್ವಹಣೆಗೆ ಕರ್ನಾಟಕದಲ್ಲೂ ಪ್ರತ್ಯೇಕ ತಂಡ ರಚಿಸುವಂತೆ ಕನ್ನಡ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.