ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗಲೇ ಚಿಗರಿ ಬಸ್ಸನ ಎಕ್ಸೆಲ್ ಕಟ್, ತಪ್ಪಿದ ಅನಾಹುತ…. ಹೆಚ್‌ಡಿಬಿಆರ್‌ಟಿಎಸ್ ಡಿವೈಡರ್ ಗ್ರೀಲ್‌ಗೆ ಬಸ್ಸ ಡಿಕ್ಕಿ, ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ.
ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗಲೇ ಚಿಗರಿ ಬಸ್ಸನ ಎಕ್ಸೆಲ್ ಕಟ್ಟಾಗಿದ ಪರಿಣಾಮ ಚಿಗರಿ ಬಸ್ಸ ಅಪಘಾತವಾಗಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಧಾರವಾಡದ ಟೋಲನಾಕಾ ಬಳಿ ಇಂದು ನಡೆದಿದೆ.
ಧಾರವಾಡದಿಂದ ಹೆಚ್ ಡಿ ಬಿ ಆರ್ ಟಿಎಸ್ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಧಾರವಾಡದ ಟೋಲನಾಕಾ ಬಳಿ ಈ ದುರ್ಘಟನೆ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬಸ್ಸನ ಎಕ್ಸೆಲ್ ಕಟ್ಟಾಗಿದ್ದರಿಂದ ಚಿಗರಿ ಬಸ್ಸ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದಾಗಿ ರಸ್ತೆ ಡಿವೈಡರ್‌ಗೆ ಬಸ್ಸ ಡಿಕ್ಕಿಯಾಗಿದೆ.
ಬಸ್ಸ ಹೀಗೆ ಅಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಬಸ್ಸನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇನ್ನೂ ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.