ಬೆಂಗಳೂರು, ಜುಲೈ 1: ಬೆಳಗಾವಿ ಜಿಲ್ಲೆ ಕಾಗ್ವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಾಜು ಕಾಗೆ (ಭರಮಗೌಡ ಆಲಗೌಡ ಕಾಗೆ) ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ (Randeep Surjewala) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ನೇರ ಮಾತುಗಾರಿಕೆಗೆ ಹೆಸರಾಗಿರುವ ರಾಜು ಕಾಗೆ, ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುತ್ತಾ, ನಿನ್ನೆ ಜರೂರು ಸಭೆಯೊಂದರ ನಿಮಿತ್ತ ಬೆಂಗಳೂರುಗೆ ಬರಲಾಗಲಿಲ್ಲ,
ಇವತ್ತು ಭೇಟಿಯಾಗುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದೆ ಎಂದರು. ಮೊನ್ನೆ ಮಾಧ್ಯಮಗಳ ಮುಂದೆ ಆಡಿರುವ ಮಾತುಗಳನ್ನೇ ಸುರ್ಜೆವಾಲಾ ಅವರಿಗೆ ಹೇಳುತ್ತೇನೆ, ಯಾವೆಲ್ಲ ಬದಲಾವಣೆಗಳು ತರುತ್ತಾರೋ ಅವರಿಗೆ ಬಿಟ್ಟಿದ್ದು ಎಂದು ಕಾಗೆ ಹೇಳಿದರು.