Breaking News

ಮನೆ ಬಿಟ್ಟು ಹೊಗಿದ್ದ ವ್ಯಕ್ತಿ 38 ವರ್ಷದ ಬಳಿಕ ಮನೆಗೆ ವಾಪಸ್.!!! 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಚಂದ್ರಶೇಖರ್…

Spread the love

ಮನೆ ಬಿಟ್ಟು ಹೊಗಿದ್ದ ವ್ಯಕ್ತಿ 38 ವರ್ಷದ ಬಳಿಕ ಮನೆಗೆ ವಾಪಸ್.!!!
18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಚಂದ್ರಶೇಖರ್…
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕು, ಗೊರಬಾಳ ಗ್ರಾಮದಲ್ಲಿ ಅತ್ಯಂತ ಅಪರೂಪದ ಘಟನೆಗೆ ಇಂದು ಸಾಕ್ಷಿಯಾಯಿತು. 38 ವರ್ಷಗಳ ಹಿಂದೆ, ತನ್ನ 18ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋದ ಚಂದ್ರಶೇಖರ್ ರಾಠೋಡ್, ಇದೀಗ ತಮ್ಮ ಸ್ವಗ್ರಾಮ ಗೊರಬಾಳಕ್ಕೆ ಮರಳಿ ಬಂದಿದ್ದಾರೆ.
ಅಂದು ಏನೋ ಕಾರಣಗಳಿಂದ ಮನೆಯನ್ನೇ ಬಿಟ್ಟು ಹೋಗಿದ್ದ ಚಂದ್ರಶೇಖರ್, ಈ ಎಲ್ಲಾ ವರ್ಷಗಳು ಕಳೆಯುವವರೆಗೆ ಕುಟುಂಬದವರ ಜೊತೆ ಯಾವುದೇ ಸಂಪರ್ಕದಲ್ಲಿರಲಿಲ್ಲ. ತಮ್ಮ ಅಣ್ಣ ಚಂದ್ರಶೇಖರ್ ಸಿರಸಿಯಲ್ಲಿ ವಾಸವಿದ್ದಾರೆ ಎಂಬ ಮಾಹಿತಿ ಇಂದು ಬಂದ ತಕ್ಷಣ, ತಮ್ಮ ಗಂಭೀರ ಪ್ರಯತ್ನದಿಂದ ಹಣಮಂತ್ ರಾಠೋಡ್ ಅಣ್ಣನನ್ನು ಹುಡುಕಿ ಅವರನ್ನು ಮನೆಗೆ ಕರೆತಂದರು.
ಅಣ್ಣನನ್ನು 38 ವರ್ಷಗಳ ನಂತರ ಮನೆ ಬಾಗಿಲು ತಲುಪಿಸುತ್ತಿರುವ ದೃಶ್ಯವನ್ನು ನೋಡಿ ಆನಂದಭಾಷ್ಪ ಸುರಿಸಿ ಅವರನ್ನು ಬರಮಾಡಿಕೊಂಡರು. ಗೊರಬಾಳ ಗ್ರಾಮಸ್ಥರಿಗೂ ಈ ಕ್ಷಣ ವಿಶಿಷ್ಟವಾಗಿತ್ತು.
“ಅಣ್ಣನನ್ನು ಈಷ್ಟು ವರ್ಷಗಳ ಬಳಿಕ ಕಂಡಾಗ ಎಷ್ಟೋ ಭಾವನೆಗಳು ಮಿಡಿಯುತ್ತವೆ. ನಮಗೆ ದೇವರು ಮತ್ತೆ ಒಬ್ಬ ಸದಸ್ಯನನ್ನು ಕೊಟ್ಟಂತಾಗಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾನೆ. ಇನ್ನು 38 ವರ್ಷಗಳ ಬಳಿಕ ಕುಟುಂಬವನ್ನು ಮತ್ತೇ ಸೇರಿದ ಚಂದ್ರಶೇಖರ್ ಅವರು ಕುಟುಂಬಸ್ಥರಿಂದ ಬೇರ್ಪಟ್ಟು ಜೀವಿಸಿದ್ದ ಘಟನೆಗಳನ್ನು ಮೆಲುಕು ಹಾಕಿದ್ದು ಹೀಗೆ.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ