ಖಾನಾಪೂರದ ಅಸೋಗಾ ರಸ್ತೆಯ ರೇಲ್ವೆ ನಿಲ್ದಾಣದ ಬಳಿಯ ರಸ್ತೆಯ ತಡೆಗೋಡೆ ಕುಸಿತ
ಖಾನಾಪೂರದ ರೇಲ್ವೆ ನಿಲ್ದಾಣದ ಬಳಿ ಇರುವ ಅಸೋಗಾ ರಸ್ತೆಯ ಮೇಲೆ ರೇಲ್ವೆ ಇಲಾಖೆ ವತಿಯಿಂದ ಸಬ್ ವೇ ಕಾಮಗಾರಿ ಆರಂಭವಾಗಿದ್ದು
ಇದರ ಪೂಜೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೇರವೇರಿಸಿದರು
ಖಾನಾಪೂರ ತಾಲೂಕಿನಲ್ಲಿ ಮಳೆಯ ಆರ್ಭಟ ಹೇಗೆ ಇರುತ್ತದೆ ಎಂಬುದರ ಅರಿವು ಎಲ್ಲರಿಗೂ ಗೊತ್ತು ಆದರೆ ಮಳೆಯ ಆರ್ಭಟದ ಮೊದಲೇ ಈ ಕಾಮಗಾರಿಯನ್ನು ತ್ವರಿತವಾಗಿ ಮಾಡಿ ಮುಗಿಸಬೇಕಾಗಿತ್ತು ಆದರೆ ಹೀಗೆ ಆಗಲಿಲ್ಲ ಈಗ ಖಾನಾಪೂರ ಅಸೋಗಾ ಸಂಚಾರಕ್ಕೆ ಮುಖ್ಯ ರಸ್ತೆಯಾಗಿದ್ದ ಈ ರಸ್ತೆ ಸದ್ಯಕ್ಕೆ ಇನ್ನಿತರ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕಾಮಗಾರಿಯಿಂದಾಗಿ ತಡೆಗೋಡೆ ಕುಸಿದು ರಸ್ತೆ ಸಂಚಾರಕ್ಕೆ ಬಹಳ ಅನಾನುಕೂಲ ಉಂಟಾಗುತ್ತಿದ್ದು
ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಮಳೆಯ ಅಬ್ಬರಕ್ಕೆ ಅಕ್ಕ ಪಕ್ಕದ ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ರಸ್ತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆಂತಕ ಪಡುವ ಸನ್ನಿವೇಶ ನಿರ್ಮಾಣವಾಗಿದೆ ಇದರ ಬಗ್ಗೆ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಯೋಗ್ಯ ರೀತಿಯ ವ್ಯವಸ್ಥೆ ಮಾಡುವ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಬೇಡಿಕೆ ಮಾಡುತ್ತಿದ್ದಾರೆ.
Laxmi News 24×7