Breaking News

ವಿಷಪ್ರಾಶನದಿಂದ ಹುಲಿ ಸಾವು ದೃಢವಾದರೆ, ಏಳು ವರ್ಷ ಶಿಕ್ಷೆ : ನಿವೃತ್ತ ಡಿಸಿಎಫ್ ಪೂವಯ್ಯ

Spread the love

ಮೈಸೂರು : ಐದು ಹುಲಿಗಳ ಸಾವು ವಿಷಪ್ರಾಶನ ಆಗಿದೆ ಎಂದು ದೃಢಪಟ್ಟರೆ, ತಪ್ಪಿತಸ್ಥರಿಗೆ ಏಳು ವರ್ಷ ಶಿಕ್ಷೆಯಾಗಲಿದೆ ಎಂದು ನಿವೃತ್ತ ಡಿಸಿಎಫ್ ಪೂವಯ್ಯ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಗುಂಡ್ಲುಪೇಟೆಯಲ್ಲಿ ಎಸಿಎಫ್ ಆಗಿದ್ದಾಗ ಒಂದು ಕಪ್ಪು ಚಿರತೆ, ಮತ್ತೊಂದು ನಾರ್ಮಲ್ ಚಿರತೆ ಸೇರಿ ಎರಡು ಚಿರತೆ ಮರಿಗೆ ವಿಷ ಹಾಕಿದ್ದರು. ಆ ವೇಳೆ ಕಾನೂನು ಪ್ರಕಾರವೇ ಶಿಕ್ಷೆಯಾಗಿತ್ತು. ಈ ಪ್ರಕರಣದಲ್ಲೂ ಅದೇ ಮಾದರಿ ಶಿಕ್ಷೆ ಆಗಲಿದೆ ಎಂದಿದ್ದಾರೆ.

ಇದರಲ್ಲಿ ಅಧಿಕಾರಿಗಳ ಪಾತ್ರವೇನಿಲ್ಲ. ಹುಲಿಗಳ ಸಾವಿಗೆ ವಿಷ ಹಾಕಿದವರೇ ನೇರ ಹೊಣೆಯಾಗುತ್ತಾರೆ. 5 ಹುಲಿ ಸಾವು ದೊಡ್ಡ ನಷ್ಟವಾಗಿದೆ. ಹುಲಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಸಮೀಪದ ಅರಣ್ಯದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳಿಗೆ ವಿಷವುಣಿಸಿ ಸಾವಾಗಿರಬಹುದು. ಹುಲಿಗಳಿಗೆ ವಿಷವುಣಿಸಿ ಸಾವು ಸಂಭವಿಸಿದ್ದರೆ, ಈ ಪ್ರಕರಣದ ತಪ್ಪಿತಸ್ಥರಿಗೆ ಸುಮಾರು 7 ವರ್ಷ ಜೈಲು ಶಿಕ್ಷೆಯಾಗಲಿದೆ ಎಂದಿದ್ದಾರೆ.

ಹುಲಿಗಳು ಒಂದು ಪ್ರಾಣಿಯನ್ನು ಕೊಂದರೆ ಸಂಪೂರ್ಣ ಮುಗಿಯುವವರೆಗೂ ಬೇರೆ ಪ್ರಾಣಿ ಬೇಟೆಯಾಡುವುದಿಲ್ಲ. ಇತ್ತೀಚಿಗೆ ಈ ಭಾಗದಲ್ಲಿ ಒಂದು ಹಸುವನ್ನು ಹುಲಿ ಬಲಿ ಪಡೆದಿದೆ ಎನ್ನುವ ಮಾಹಿತಿ ಇದೆ. ಬಲಿ ಪಡೆದ ಹಸುವಿನ ದೇಹಕ್ಕೆ ವಿಷ ಹಾಕಿರಬಹುದು. ಫಾರೆನ್ಸಿಕ್ ಲ್ಯಾಬ್​​ನಿಂದ ಸುಮಾರು ಒಂದು ವಾರದ ನಂತರ ವರದಿ ಬರಲಿದೆ. ಈ ವರದಿಯಲ್ಲಿ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ