ಬೆಳಗಾವಿ : ಕ್ಯಾಂಪ್ ಠಾಣೆ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ 3 ಆರೋಪಿಗಳ ಬಂಧನ
ಬೆಳಗಾವಿ ಕ್ಯಾಂಪ್ ಪ್ರದೇಶದ ಧೋಬಿ ಘಾಟ್ ಬಳಿ ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕ್ಯಾಂಪ್ ಠಾಣಾ ಪೊಲೀಸರು ಬಂಧಿಸಿದ್ದಾರೆ
ಮಾದಕ ವಸ್ತು ಮಾರಾಟದ ಮೇಲೆ ಮಿಂಚಿನ ದಾಳಿ ನಡೆಸಿರುವ ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್ಐ ಎ. ರುಕ್ಮಿಣಿ ಹಾಗೂ ಸಿಬ್ಬಂದಿ ಕ್ಯಾಂಪ ಪ್ರದೇಶದ ಧೋಬಿ ಘಾಟ್ ಬಳಿ, ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬೆನಕನಹಳ್ಳಿಯ ಎಲ್ಲಪ್ಪ ದೇಸೂರಕರ, ಆನಂದ್ ಪಾಟೀಲ್ ಹಾಗೂ ಕಂಗ್ರಾಳಿ ಗ್ರಾಮದ ಕಾರ್ತಿಕ್ ಎಂಬ ಆರೋಪಿಗಳನ್ನು ಬಂಧಿಸಿ ಅವರಿಂದ 11,850 ರೂಪಾಯಿ ಮೌಲ್ಯದ 237 ಗ್ರಾಂ ಗಾಂಜಾ ಹಾಗೂ 520 ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
Laxmi News 24×7