Breaking News

ಬರೋಬ್ಬರಿ 5 ಲಕ್ಷ ಹನ್ನೊಂದು ಸಾವಿರ ರೂಪಾಯಿ ದಾಖಲೆ ಬೆಲೆಗೆ ಎತ್ತು ಮಾರಾಟ!!

Spread the love

ಬರೋಬ್ಬರಿ 5 ಲಕ್ಷ ಹನ್ನೊಂದು ಸಾವಿರ ರೂಪಾಯಿ ದಾಖಲೆ ಬೆಲೆಗೆ ಎತ್ತು ಮಾರಾಟ!!
ಎತ್ತು ಮಾರಾಟದ ವಿಷಯದಲ್ಲಿ ಈಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬುದ್ನಿ ಗ್ರಾಮ ರಾಜ್ಯದಾದ್ಯಂತ ಗಮನ ಸೆಳೆದಿದೆ. ಇಲ್ಲೊಂದು ಎತ್ತು ಬರೋಬ್ಬರಿ 5 ಲಕ್ಷಕ್ಕೆ ಮಾರಾಟವಾಗಿದೆ.
ಇಲ್ಲಿನ ಮಹಾದೇವಪ್ಪ ಕೊಲೂರ ಎಂಬುವವರಿಗೆ ಸೇರಿದ ಒಂದು ಶಕ್ತಿಶಾಲಿ ಎತ್ತು ಬರೋಬ್ಬರಿ ₹5,11,000ಕ್ಕೆ ಮಾರಾಟವಾಗಿದೆ! ಇದು ಈವರೆಗೆ ಆ ಭಾಗದಲ್ಲಿ ದಾಖಲೆ ಬೆಲೆ ಎತ್ತಿಗೆ ಲಭಿಸಿದ ಅಪರೂಪದ ಸಂದರ್ಭವಾಗಿದೆ.
ಈ ಎತ್ತನ್ನು ಮಹಾರಾಷ್ಟ್ರದ ಪುಣೆಯಿಂದ ಬಂದಿರುವ ವಿರಾಟ್ ಕಾಟೇದಾರ್ ಎಂಬುವವರು ಖರೀದಿಸಿದ್ದಾರೆ.
ಎತ್ತಿನ ದಷ್ಟಪುಷ್ಟ ದೇಹ, ಎತ್ತರದ ನಿಲುವು, ಕಟ್ಟುಮಸ್ತಾದ ಬಲಿಷ್ಠ ರೂಪವೇ ಈ ಬೆಲೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ. ಈ ಎತ್ತು ರಾಜ್ಯದ ಹಲವು ತೆರೆಬಂಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವ ಶಕ್ತಿಶಾಲಿ ಜಾನುವಾರು. ಮಾರಾಟದ ನಂತರ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಎತ್ತಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿಸಿ, ಗುಲಾಲ್ ಎರಚಿ ಹಾಗೂ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಲಾಯಿತು. ಕುಟುಂಬಸ್ಥರು ಭಾರದ ಮನಸ್ಸಿನಿಂದಲೇ ಎತ್ತಿಗೆ ಬೀಳ್ಕೊಡುಗೆ ನೀಡಿದರು.
ಈ ಎತ್ತು ಮಾರಾಟದ ಸುದ್ದಿ ಈಗ ಬಾಗಲಕೋಟೆ ಮಾತ್ರವಲ್ಲ, ರಾಜ್ಯದ ಅನೇಕಗ್ರಾಮಾಂತರ ಪ್ರದೇಶಗಳಲ್ಲಿ ಜನರ ಚರ್ಚೆಯ ವಿಷಯವಾಗಿದೆ. ಗ್ರಾಮಸ್ಥರು ಮತ್ತು ಎತ್ತುಪ್ರೇಮಿಗಳು ಇದನ್ನು ಹೆಮ್ಮೆಪಡುವ ವಿಷಯವೆಂದು ಪರಿಗಣಿಸಿದ್ದಾರೆ.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ