Breaking News

ಮೊರಾರ್ಜಿ ಶಾಲೆಗೆ ಎಂಟನೇ ತರಗತಿಗೆ ಅಡ್ಮಿಷನ್ ಆಗಲು ಫಿಟ್ನೆಸ್ ಸರ್ಟಿಫಿಕೇಟ್ಗಾಗಿ ಬೆಳಿಗ್ಗೆಯಿಂದ ಮಧ್ಯಾಹ್ನ 1. 45ರ ತನಕ ತಾಯಿ ಮಗ ಇಬ್ಬರೂ ಆಸ್ಪತ್ರೆಯ ಮುಂಭಾಗ ಕಾಯುತ್ತಲೇ ಇದ್ದಾರೆ.

Spread the love

ಮೊರಾರ್ಜಿ ಶಾಲೆಗೆ ಎಂಟನೇ ತರಗತಿಗೆ ಅಡ್ಮಿಷನ್ ಆಗಲು ಫಿಟ್ನೆಸ್ ಸರ್ಟಿಫಿಕೇಟ್ಗಾಗಿ ಬೆಳಿಗ್ಗೆಯಿಂದ ಮಧ್ಯಾಹ್ನ 1. 45ರ ತನಕ ತಾಯಿ ಮಗ ಇಬ್ಬರೂ ಆಸ್ಪತ್ರೆಯ ಮುಂಭಾಗ ಕಾಯುತ್ತಲೇ ಇದ್ದಾರೆ.

ಕೇವಲ ಒಂದು ಸಹಿ ಅಷ್ಟೇ ಬಾಕಿ.ಇಂತಹ ವ್ಯವಸ್ಥೆಯನ್ನು ನೋಡಿದ ಮಕ್ಕಳು ಹೇಗೆ ಈ ಸಮಾಜದ ಬಗ್ಗೆ, ಅಧಿಕಾರಿಗಳ ಬಗ್ಗೆ ಒಳ್ಳೇ ಅಭಿಪ್ರಾಯ ಹೊಂದೋಕೆ ಸಾಧ್ಯ. ಕೊನೆ ಪಕ್ಷ ಆ ಕೇಸ್ ವರ್ಕರ್ ಇವರ ಅರ್ಜಿ ತೆಗೆದುಕೊಂಡು ಹೋಗಿ ಊಟ ಮಾಡಿಕೊಂಡು ಬನ್ನಿ ನಾನು ಸಹಿ ಹಾಕಿಸಿ ಇಟ್ಟಿರುತ್ತೇನೆ ಎನ್ನುವ ಕನಿಷ್ಠ ಸೌಜನ್ಯವನ್ನು ತೋರದೆ ಬೆಳಿಗ್ಗೆಯಿಂದ ಕೂರಿಸಿದ್ದಾನಲ್ಲ.ಛೆ

ನಮ್ಮನ್ನು ಆಳೋರಿಗೆ ಇಲ್ಲದ ಫಿಟ್ನೆಸ್ ಸರ್ಟಿಫಿಕೇಟ್, ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಯಾಕೆ ಬೇಕೋ ? ದೇವರೇ ಬಲ್ಲ.

ಒಂದು ಐನೂರು ಸಾವಿರ ತಳ್ಳಿದ್ರೆ ಕೇಸ್ ವರ್ಕರ್ ಮನೆಗೆ ಬರ್ತಾನೆ. ಇದು ನಮ್ಮ ದುರ್ಗತಿ. ಬಡವರೆಂದರೆ ಎಷ್ಟು ತಾತ್ಸಾರ ಈ ಸರ್ಕಾರಿ ಇಲಾಖೆ ಯವರಿಗೆ ಅಂದ್ರೆ ಶ್ರೀಮಂತ ಹೋದ್ರೆ ಸರ್ ಚೇರ್ ಮೇಲೆ ಕೂರಿಸಿ ಆವಾಗ್ಲೇ ಸಹಿ ಮಾಡಿ ಕೊಡುತ್ತಾರೆ. ಬಡವರಿಗೆ ಹೋದ್ರೆ ಹೊರಗೆ ಕೂತೀರಿ ಮತ್ತೆ ಕರೆಯುತ್ತೆನೆ ಹೇಳಿ ಸತಾಯಿಸ್ತಾರೆ..

ಪ್ರಾಮಾಣಿಕವಾಗಿ ಕೆಲಸ ಮಾಡುವವರು ಸರ್ಕಾರಿ ಇಲಾಖೆ ಯಲ್ಲಿ ಬೆರಳಣಿಕೆಯಷ್ಟು ಮಾತ್ರ ಇದ್ದರೆ ಮತ್ತೇಲ್ಲರೂ ಭ್ರಷ್ಟಾಚಾರಿಗಳು ತುಂಬಿದ್ದಾರೆ. ಕೆಲವು ಸರ್ಕಾರಿ ನೌಕರರಲ್ಲಿ ಮಾನವೀಯತೆ ಅನ್ನೋದು ಮತ್ತು ಮನುಷ್ಯತ್ವ ಅನ್ನೋದು ಸತ್ತುಹೋಗಿದೆ.

ಅಧಿಕಾರಿಗಳ ಮಕ್ಕಳು ಓದೊದು ಖಾಸಗಿ ಶಾಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ಅವರಿಗೆ ಚಿಂತೆ ಯಾಕೆ? ಜನ ಇಂತ ಸಂದರ್ಭದಲ್ಲಿ ಮರಗುತ್ತಾರೆ ಚುನಾವಣೆ ದಿನ ಹಣಕ್ಕೆ ಮತ ಮಾರಿಕೊಳ್ತಾರೆ ಅಗಾಗಿ ಇವೆಲ್ಲವೂ ಸಹಜ ಅನ್ನೊ ರೀತಿ ಅಗುತಿದೆ, ಎಲ್ಲಿಯವರೆಗೆ ಜನ ಹಣ ತೆಗೆದುಕೊಂಡ ಮತ ಅಕೊದು ಬಿಡ್ತರ ಅಲ್ಲಿವರೆಗೆ ಇದು ನಿಲ್ಲೊದಿಲ್ಲ

ಇಂತ ಘಟನೆ ಅದಾಗ ಒಂದೆರಡು ದಿನ ಜನರು ಮರುಗುತ್ತಾರೆ ಅಮೇಲೆ ಮರೆತು ಅದೇ ತಪ್ಪು ಮಾಡ್ತಾರೆ.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ