ಚಿಕ್ಕೋಡಿ, ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಪಕ್ಷದಿಂದ ಆದಷ್ಟು ಬೇಗನೆ ಸಿಹಿ ಸುದ್ದಿ ಬರುತ್ತದೆ. ಒಂದು ಸ್ಥಾನ ಮಾನವೂ ಸಿಗುತ್ತದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಆಗಿರುವ ಯತ್ನಾಳ್ಗೆ ಬಿಜೆಪಿ ಪಕ್ಷ ಸಂತೋಷದ ಸುದ್ದಿ ನೀಡುತ್ತದೆ. ಶಾಸಕ ಯತ್ನಾಳ ಅವರು ಕೂಡ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಮಾದ್ಯಮಗಳ ಮುಖಾಂತರ ಮನವಿ ಮಾಡಿದರು.
ಬಿಜೆಪಿ ಪಕ್ಷದಿಂದ ಟಿ.ಸೋಮಶೇಖರ್ ಹಾಗೂ ಹೆಬ್ಬಾರ್ ಉಚ್ಚಾಟನೆ ಪಕ್ಷದ ತಿರ್ಮಾನವಾಗಿದ್ದು, ನಾನು ಅದನ್ನು ಸ್ವಾಗತಿಸುತ್ತೇನೆ. ಪಕ್ಷಕ್ಕಿಂತ ನಾನು ದೊಡ್ಡವನಲ್ಲ, ವರಿಷ್ಠರು ನಮಗೆ ತುಂಬಾ ಕಿಮ್ಮತ್ತು ಕೊಟ್ಟಿದ್ದಾರೆ. ನಮ್ಮ ಜೊತೆ ಚೆನ್ನಾಗಿದ್ದಾರೆ ಎಂದರು. ಪಕ್ಷದಲ್ಲಿ ಕೆಲವರಿಗೆ ನೊಟೀಸ್ ನೀಡಲಾಗಿದೆ, ಅವರು ಸದ್ಯಕ್ಕೆ ಬಾಯಿ ಮುಚ್ಚಿಕೊಂಡಿದ್ದಾರೆ, ಏನಾದರೂ ಪಕ್ಷದ ಚೌಕಟ್ಟು ಬಿಟ್ಟರೆ ಅವರನ್ನು ಉಚ್ಚಾಟನೆ ಮಾಡುತ್ತಾರೆ ಎಂದರು.