Breaking News

ಮಳೆಗಾಲ ನಿರ್ವಹಣೆಗೆ ಮಹಾನಗರ ಪಾಲಿಕೆಯಲ್ಲಿ ಜಂಟಿ ಸಭೆ…

Spread the love

ಮಳೆಗಾಲ ನಿರ್ವಹಣೆಗೆ ಮಹಾನಗರ ಪಾಲಿಕೆಯಲ್ಲಿ ಜಂಟಿ ಸಭೆ…
ಹಾನಿ ಸಂಭವಿಸುವ ಮುನ್ನ ಎಚ್ಚೆತ್ತು ಸರ್ವೆ ನಡೆಸಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ; ಮಹಾಪೌರ ಮಂಗೇಶ್ ಪವಾರ್
ಅಪಾಯದ ಅಂಚಿನಲ್ಲಿರುವ ಮರಗಳ ಸರ್ವೆ ನಡೆಸಿ, ಹಾನಿ ಸಂಭವಿಸುವ ಮುನ್ನವೇ ಎಚ್ಚೆತ್ತು ಕ್ರಮಕೈಗೊಳ್ಳಬೇಕೆಂದು ಬೆಳಗಾವಿಯ ಮಹಾಪೌರರಾದ ಮಂಗೇಶ್ ಪವಾರ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಮತ್ತು ಮರ ಕತ್ತರಿಸುವ ಗುತ್ತಿಗೆದಾರರ ಮಳೆಗಾಲ ಆರಂಭದ ಹಿನ್ನೆಲೆ ಮುಂಜಾಗೃತಾ ಸಭೆಯನ್ನು ಬೆಳಗಾವಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಮಳೆಗಾಲ ಈಗಾಗಲೇ ಆರಂಭವಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆ ನಗರದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಆಯಾ ನಗರ ಸೇವಕರ ಉಪಸ್ಥಿತಿಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮತ್ತು ಅಪಾಯಕಾರಿ ಮರಗಳ ಸರ್ವೆ ನಡೆಸಲು ಸೂಚಿಸಲಾಯಿತು. ಅದರಲ್ಲಿ ಎಬಿಸಿ ಕ್ಯಾಟಗೇರಿಗಳನ್ನು ತಯಾರಿ ತ್ವರಿಗತಿಯಲ್ಲಿ ಕಾರ್ಯಾಚರಣೆಯನ್ನು ಕೈಗೊಂಡು ಹಾನಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕೆಂದು ಮಹಾಪೌರರು ಸೂಚಿಸಿದರು.
ಈ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ ಬಿ. ಅವರು ನಗರದಲ್ಲಿರುವ ಅಪಾಯಕಾರಿ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸುವುದು ಮತ್ತು ಬೀಳುವಂತಹ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಸರ್ವೆ ಮಾಡಿ ತೆರವುಗೊಳಿಸಲು ಸೂಚನೆಯನ್ನು ನೀಡಲಾಯಿತು. ಅಲ್ಲದೇ, ಸಹಾಯವಾಣಿಯನ್ನು ಕೂಡ ಆರಂಭಿಸಲಾಗಿದೆ.
ಇನ್ನು 15000 ಮೀಟರನಷ್ಟು ನಾಲೆಗಳ ಹೂಳೆತ್ತಲಾಗಿದೆ. ಯುಜಿಡಿ ಮಷೀನ್, ನೂತನ ಜೆಟ್ಟಿಂಗ್ ಮಷೀನ್ , ಸಕ್ಕೀಂಗ್ ಮಷೀನ್, ಯುಜಿಡಿ ವಾಹನಗಳೊಂದಿಗೆ ತಂಡ ಸಜ್ಜಾಗಿದೆ. ಮಳೆಹಾನಿ ಮತ್ತು ಜಾನುವಾರುಗಳ ಹಾನಿಯನ್ನು ವರದಿ ಮಾಡಲು ಕೂಡ ತಂಡವನ್ನು ರಚಿಸಲಾಗಿದೆ ಎಂದರು.
ಇನ್ನು ಕೋವಿಡ್’ಗೆ ಸಂಬಂಧಿಸಿದಂತೆ ಕಟ್ಟೆಚ್ಚರವನ್ನು ವಹಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಮುಂಜಾಗೃತೆ ಮೂಡಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಹಣಮಂತ ಕೊಂಗಾಲಿ, ನಗರಸೇವಕರಾದ ಜಯತೀರ್ಥ ಸೌಂದತ್ತಿ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಪುರುಷೋತ್ತಮ, ಉಪ ವಲಯ ಅರಣ್ಯಾಧಿಕಾರಿಗಳಾದ ವಿನಯ ಗೌಡರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶ್ವೀನ್ ಶಿಂಧೆ ಸೇರಿದಂತೆ ಮಹಾನಗರ ಪಾಲಿಕೆ ಹಾಗೂ ಇನ್ನುಳಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್‌ನ್ಯೂಸ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Spread the loveಬೆಳಗಾವಿ: “ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ಕೊಟ್ಟಿದ್ದಾರೆ. ಈ ಸೋಮವಾರದಿಂದ ಶನಿವಾರದೊಳಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ