Breaking News

ಸನ್ನಡತೆ ಮೇರೆಗೆ 74 ಅಪರಾಧಿಗಳಿಗೆ ರೌಡಿಶೀಟರ್​ಗಳ ಪಟ್ಟಿಯಿಂದ ಬಿಡುಗಡೆ

Spread the love

ತುಮಕೂರು: ಸನ್ನಡತೆ ಆಧಾರದ ಮೇಲೆ 74 ರೌಡಿಶೀಟರ್​ಗಳನ್ನು ರೌಡಿಶೀಟರ್​​ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ. ಮಂಗಳವಾರ ತುಮಕೂರು ಎಸ್​ಪಿ ಕಚೇರಿ ಬಳಿಯಿರುವ ಡಿಆರ್​​ ಗ್ರೌಂಡ್​ನಲ್ಲಿ ರೌಡಿಶೀಟರ್​ಗಳ​ ಸಭೆ ಕರೆಯಲಾಗಿತ್ತು. ಈ ವೇಳೆ, ಎಸ್​ಪಿ ಅಶೋಕ್ ಕೆ.ವಿ. ರೌಡಿಶೀಟರ್​ಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ.

ಈ ಆಧಾರದ ಮೇಲೆ ರೌಡಿಶೀಟರ್​ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ; ತುಮಕೂರು ಜಿಲ್ಲೆಯಲ್ಲಿ ಒಟ್ಟು 901 ಜನ ರೌಡಿಶೀಟರ್​ಗಳಿದ್ದಾರೆ. ಅವರನ್ನು ಪರಿಶೀಲನೆ ಮಾಡಿದಾಗ ಕೆಲ ರೌಡಿಶೀಟರ್​ಗಳು ಕಳೆದ 10 ವರ್ಷಗಳಿಂದ ಯಾವುದೇ ಕೇಸ್​ಗಳಲ್ಲಿ ಭಾಗಿಯಾಗಿರಲಿಲ್ಲ. ಜತೆಗೆ ಅವರ ಮೇಲಿದ್ದ ಕೇಸ್​ಗಳು ಕೋರ್ಟ್​ನಲ್ಲಿ ಖುಲಾಸೆಯಾಗಿವೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೇ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಅಂತವರ ಬಗ್ಗೆ ರಿಪೊರ್ಟ್ ಪಡೆದು ಅವರ ಮೇಲಿದ್ದ ರೌಡಿಶೀಟರ್​ನ್ನು ಕ್ಲೋಸ್​ ಮಾಡಲಾಗಿದೆ.

ಇದೇ ಪುನರಾವರ್ತನೆ ಆದರೆ ಮತ್ತೆ ಓಪನ್​ ಮಾಡ್ತೇವೆ: ಎಚ್ಚರಿಕೆ ನೀಡಿದ ಎಸ್​ಪಿ;

“ಒಟ್ಟು 74 ಜನ ಅಪರಾಧಿಗಳನ್ನು ರೌಡಿಶೀಟರ್​ ಪಟ್ಟಿಯಿಂದ ಮುಕ್ತಾಯ ಮಾಡಲು ತಿರ್ಮಾನ ಮಾಡಲಾಗಿದೆ. ಹೆದರಿಸೋದು, ಬೆದರಿಸೋದು, ಕ್ರೈಂ ಕೇಸ್​ನಲ್ಲಿ ಭಾಗಿಯಾಗೋದು, ಗ್ಯಾಮ್ಲಿಂಗ್, ಲಿಕ್ಕರ್ ಈ ತರಹದ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿಶೀಟರ್ ಓಪನ್ ಮಾಡುತ್ತೇವೆ. ಅಪರಾಧಿಗಳನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲು ಕಾರಣವಿರುತ್ತದೆ. ಅಂತಹವರನ್ನು ಚುನಾವಣೆ ಹಾಗೂ ಗಲಭೆ ಸಮಯದಲ್ಲಿ ಗಡಿಪಾರು ಮಾಡುತ್ತೇವೆ”.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ