Breaking News

ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತರು ಪ್ರತಿಭಟನೆ

Spread the love

ಮೂಡಲಗಿ : ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದು ಅದೇ ಪ್ರಕಾರ ಸ್ಥಳೀಯ ಆಶಾ ಕಾರ್ಯಕರ್ತೆಯರು ತಮ್ಮ  ಬೇಡಿಕೆಗಳ ಈಡೇರಿಕೆಗಾಗಿ ತಹಸಿಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. 
ಸೋಮವಾರದಂದು ಸಲ್ಲಿಸಿದ ಮನವಿ ಪತ್ರದಲ್ಲಿ ಈಗಾಗಲೇ ತಿಳಿಸಿದಂತೆ ಇದೇ ಜುಲೈ 10 ರಿಂದ ಆರೋಗ್ಯಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 
ಬೇಡಿಕೆಗಳು ಮಾಸಿಕ 12 ಸಾವಿರ ರೂಗಳ ಗೌರವ ಖಾತರಿಪಡಿಸಬೇಕು.ಕೋವಿಡ 19  ವಿರುದ್ಧ ಹೋರಾಟದಲ್ಲಿ ಅಗತ್ಯ ಸುರಕ್ಷತಾ ಉಪಕರಣಗಳು ಒದಗಿಸಬೇಕು. ಆಕಸ್ಮಿಕವಾಗಿ ಕೋವಿಡ 19 ತಗುಲಿದ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಪರಿಹಾರ ನೀಡಬೇಕು  ಎಂದು ಸೇರಿ ಇನ್ನೂ ಹಲವಾರು ಬೇಡಿಕೆಗಳೊಂದಿಗೆ ಜೂನ್ 30 ರಿಂದ ಒಂದು ವಾರ ದಿಂದ ಸರಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇದು ಅಲ್ಲದೆ ಈ ಹಿಂದೆ ಹತ್ತಾರು ಸಲ ಅವಶ್ಯ  ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದರು ಕೂಡಾ ಅವಶ್ಯಕ ಕ್ರಮ ಜರುಗದೆ ಇದ್ದ ಕಾರಣ ಅನಿವಾರ್ಯವಾಗಿ  ಜುಲೈ 10 ರಿಂದ  ಸೇವೆ ಸ್ಥಗಿತಗೊಳಿಸಲಾಗಿದೆ. 
 ಈ ಸಂದರ್ಭದಲ್ಲಿ  ಆಶಾ ಕಾಯ೯ಕತೆ೯ಯರಾದ ಶೋಬಾ ಕಮ್ಮಾರ , ಮಹಾದೇವಿ ಮುಗಳಖೋಡ, ಕಾಶವ್ವಾ ಹಳಿಗಳಿ, ಲಕ್ಷ್ಮೀ ಕುದರಿ , ಬೋರವ್ವಾ ನಾಶಿ , ಮಹಾದೇವಿ ಹಣಬರ, ಲಕ್ಷ್ಮೀ ಭಜಂತ್ರಿ , ಸವಿತಾ ಪುಟಾಣಿ , ಶೋಬಾ ಶಾಬನ್ನವರ , ಇಂದುಮತಿ ರಾಜನಾಳ, ಮೇರಿ ಸಿಂದೆ, ರೇಣುಕಾ ಅವರಾದಿ, ರೇಣುಕಾ ನಾಶಿ, ನಿಮ೯ಲಾ ದರೂರ, ಸವಿತಾ ಪಾಲಬಾಂವಿ,  ವಿಜಯಲಕ್ಷ್ಮಿ ರೇಳೆಕರ, ರತ್ನಾ  ದಳವಾಯಿ,  ರತ್ನಾ ಹಳ್ಳಿ ,  ಸವಿತಾ ಅನಂತಪೂರಿ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಶ್ರೀ ದುರುದುಂಡೇಶ್ವರ ಮಠದ ಮಹಾದಾಸೋಹ ಮಹೋತ್ಸವ

Spread the love ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಶ್ರೀ ದುರುದುಂಡೇಶ್ವರ ಮಠದ ಮಹಾದಾಸೋಹ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಲಾಯಿತು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ