ಬೆಳಗಾವಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ
ಕೊನೆಗೂ ಮೂರನೇ ಆರೋಪಿ ಹಾಗೂ ರೆಸಾರ್ಟ್ ಸಂಚಾಲಕರ ಬಂಧನ…
ಬೆಳಗಾವಿಯಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮೂರನೇ ಆರೋಪಿ ಪರ ಜಿಲ್ಲೆಯ ಸಿಪಿಐ ಮಗ ಹಾಗೂ ರೆಸಾರ್ಟ್ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು. ಒಟ್ಟು ಆರೋಪಿಗಳ ಸಂಖ್ಯೆ 5 ಕ್ಕೇರಿದೆ.
ಟಿಳಕವಾಡಿ ಪೊಲೀಸ್ ಠಾಣಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯೂ ಹೊರ ಜಿಲ್ಲೆಯ ಸಿಪಿಐ ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಸಿಪಿಐ ಪುತ್ರ ಅಪ್ರಾಪ್ತ ಆರೋಪಿ ಸೇರಿದಂತೆ ರೆಸಾರ್ಟ್ ನಡೆಸುತ್ತಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಳಗಾವಿ ಹೊರ ವಲಯದ ರೆಸಾರ್ಟ್ ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಸಾಕೀಬ್ ಎಂಬಾತ ಸೇರಿ ಇಬ್ಬರು ಅಪ್ರಾಪ್ತರಿಂದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಕೇಸ್ ಸಾಕೀಬ್ ಸೇರಿ ಓರ್ವ ಅಪ್ರಾಪ್ತನನ್ನ ಅರೆಸ್ಟ್ ಮಾಡಿದ್ದ ಪೊಲೀಸರು. ಈಗ ಸಿಪಿಐ ಪುತ್ರ ಸೇರಿ ರೆಸಾರ್ಟ್ ನಡೆಸುತ್ತಿದ್ದವರು ಬಂಧಿಸಿದ್ದಾರೆ. ಅಪ್ರಾಪ್ತರಿಗೆ ರೆಸಾರ್ಟ್ ಕೊಟ್ಟಿದ್ದ ರೋಹನ್ ಪಾಟೀಲ್, ಅಶತೋಷ ಪಾಟೀಲ್ ಹಿಂಡಲಗಾ ಜೈಲಿಗೆ ರವಾನೆ ಮಾಡಿದ್ದಾರೆ.
ಮನೆಯೊಂದನ್ನು ಬಾಡಿಗೆ ಪಡೆದು ತಿಂಗಳಿಗೆ 20 ಸಾವಿರಕ್ಕೆ ರೆಸಾರ್ಟ್ ಆಗಿ ಪರಿವರ್ತನೆ ಮಾಡಿದ್ದರು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ. ಸಿಪಿಐ ಪುತ್ರನನ್ನು ರಿಮ್ಯಾಂಡ್ ಹೊಮ್ ನಲ್ಲಿ ಇಡಲಾಗಿದೆ.