ಶಿವಾನುಭವ ಸಮುದಾಯ ಭವನದ ಲೋಕಾರ್ಪಣೆ
ವಿಜಯಪುರ ನಗರದ ಶತಮಾನ ಕಂಡ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಸಮುದಾಯ ಭವನದ ಲೋಕಾರ್ಪಣೆಯು ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಮನ್ಮಹಾರಾಜ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಹಾಗೂ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ, ಮಾಜಿ ಕೇಂದ್ರ ಸಚಿವರು, ವಿಜಯಪುರ ನಗರ ಶಾಸಕರು ಹಾಗೂ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳರವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಯಂಕಾಲ ಜರುಗಿತು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಕೈಗಾರಿಕಾ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಶಿವಾನುಭವ ಸಮುದಾಯ ಭವನದ 1ನೇ ಮಹಡಿಯಲ್ಲಿನ ದಿ.ಬಿ.ಎಂ.ಪಾಟೀಲ ಅವರ ಹೆಸರಿನಲ್ಲಿರುವ ಪ್ರಸಾದ ನಿಲಯ, 2ನೇ ಮಹಡಿಯಲ್ಲಿನ ದಿ.ಆರ್.ಆರ್.ಕಲ್ಲೂರ ಅವರ ಹೆಸರಿನಲ್ಲಿರುವ ಅಕ್ಷತಾ ಮಂಟಪ, 3ನೇ ಮಹಡಿಯಲ್ಲಿನ ಶ್ರೀ ಕಪಿಲೇಶ್ವರ ಯಾತ್ರಿ ನಿವಾಸ ಉದ್ಘಾಟನೆ ಕೂಡ ನೆರವೇರಿಸಲಾಯಿತು. ಸಮುದಾಯ ಭವನದಲ್ಲಿ ಭಾವಚಿತ್ರಗಳನ್ನು ಅಳವಡಿಸಲು ದೇಣಿಗೆ ನೀಡಿರುವ ದಾನಿಗಳನ್ನು ಸಹ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಗುರುಗಳು ಶ್ರೀ ಬಸವಲಿಂಗ ಸ್ವಾಮೀಜಿಗಳು, ಜ್ಞಾನಯೋಗಾಶ್ರಮ ಮತ್ತು ಬಿಳಿಗಿರಿರಂಗನಬೆಟ್ಟದ ನಿರ್ಮಲಾನಂದ ಸ್ವಾಮೀಜಿ ಆಶ್ರಮದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು, ಮುಖಂಡರು, ಗಣ್ಯರು, ಅಭಿಮಾನಿಗಳು, ಕಾರ್ಯಕರ್ತರು, ವ್ಯಾಪಾರಸ್ಥರು, ಸಿದ್ದೇಶ್ವರನ ಸಕಲ ಸದ್ಬಕ್ತರು ಉಪಸ್ಥಿತರಿದ್ದರು.