Breaking News

ಗಡಿಯಲ್ಲಿ ಚೀನಾ ಕಿರಿಕ್ : ಭಾರತದ ಬೆಂಬಲಕ್ಕೆ ನಿಂತ ಅಮೆರಿಕಾ

Spread the love

ವಾಷಿಂಗ್ಟನ್, ಡಿ.16-ಭಾರತದ ಗಡಿಯಲ್ಲಿ ಚೀನಾ ತೋರುತ್ತಿರುವ ಕ್ರೂರ ವರ್ತನೆ ಖಂಡಿಸುವುದು ಸೇರಿದಂತೆ 740 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಕ್ಷಣಾ ನೀತಿ ಮಸೂದೆಗೆ ಅಮೆರಿಕಾ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ. ಗಡಿಯಲ್ಲಿ ಭಾರತ ಸೇನೆಯ ವಿರುದ್ಧ ಚೀನಿಯರು ನಡೆಸುತ್ತಿರುವ ಕ್ರೂರ ವರ್ತನೆಯನ್ನು ಖಂಡಿಸಿರುವ ಅಮೆರಿಕಾ ಈ ಕೂಡಲೆ ಚೀನಿಯರು ತಮ್ಮ ಧೋರಣೆಯನ್ನ ಕೈಬಿಡಬೇಕು ಎಂದು ಅಮೆರಿಕಾ ಒತ್ತಾಯಿಸಿದೆ.

740 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಕ್ಷಣಾ ಮಸೂದೆಗೆ ಅಮೆರಿಕ ಜನಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಅಂಗೀಕಾರ ನೀಡಿವೆ. ಲಡಾಕ್ ಗಡಿಯಲ್ಲಿ ಚೀನಾ ಮತ್ತು ಭಾರತೀಯ ಸೇನೆಗಳ ನಡುವೆ ಕಳೆದ ಮೇ ತಿಂಗಳಿನಿಂದ ಸಂಘರ್ಷ ನಡೆಯುತ್ತಿದೆ. ಬಿಕ್ಕಟ್ಟು ಬಗೆಹರಿಸುವ ಕುರಿತಂತೆ ಹಲವಾರು ಸುತ್ತಿನ ಮಾತುಕತೆ ನಡೆದರೂ ಇದುವರೆಗೂ ಯಾವುದೆ ಪ್ರಯೋಜನವಾಗಿಲ್ಲ.ಇಂತಹ ಸಂದರ್ಭದಲ್ಲೇ ಅಮೆರಿಕಾ ಭಾರತದ ಪರ ನಿಲುವು ತೆಗೆದುಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ