ತಾಕತ್ ಇದ್ರೆ ಹುನಗುಂದಕ್ಕೆ ಬರ್ಲಿ, ನಾನೇನು ಅಂತ ತೋರಸ್ತೀನಿ…
ವಿಜಯಪುರದಲ್ಲಿ ಯತ್ನಾಳಗೆ ತಕ್ಕ ಪಾಠ ಕಲಿಸ್ತೇವೆ; ಕಾಶಪ್ಪನವರ ತಿರುಗೇಟು…
ನಾನು ಬರ್ತಿನೋ, ಸಚಿವ ಶಿವಾನಂದ ಪಾಟೀಲ ಬರ್ತಾರೋ, ಒಟ್ಟಾರೆ ಯತ್ನಾಳಗೆ ವಿಜಯಪುರದಲ್ಲೇ ತಕ್ಕಪಾಠ ಕಲಿಸ್ತೀವಿ, ಕಾಯ್ದು ನೋಡಿ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ತಾಕತ್ ಇದ್ರೆ ಹುನಗುಂದಕ್ಕೆ ಬರ್ಲಿ, ನಾನೇನು ಅಂತ ತೋರಸ್ತೀನಿ.
ಈಗಾಗಲೇ ಸಚಿವ ಶಿವಾನಂದ ಪಾಟೀಲ ರಾಜೀನಾಮೆ ನೀಡಿದ್ದಾರೆ, ನಮ್ಮ ರಾಜೀನಾಮೆ ಕೇಳೋಕೆ ಯತ್ನಾಳಗೆ ಯಾವುದೇ ನೈತಿಕ ಹಕ್ಕಿಲ್ಲ, ಬಿ ಫಾರ್ಮ್ ಪಡೆದು ಗೆದ್ದು ಬಂದಿದ್ದ ಪಕ್ಷವೇ ಯತ್ನಾಳರನ್ನ ಉಚ್ಛಾಟಿಸಿದೆ,ಮೊದಲು ಆ ಪಕ್ಷಕ್ಕೆ ಯತ್ನಾಳ ರಾಜೀನಾಮೆ ನೀಡಬೇಕು, ನಾವು ಏನು ಸಹಾಯ ಮಾಡಿದಿವಿ ಅನ್ನೋದರ ಅರಿವಿಟ್ಟುಕೊಂಡು ಮಾತನಾಡಬೇಕು, ಈ ಮನುಷ್ಯ ಮೊದಲು ರಾಜೀನಾಮೆ ನೀಡಿ ವಿಜಯಪುರದಲ್ಲೇ ನಿಲ್ಲಲಿ, ವಿಜಯಪುರಕ್ಕೆ ನಾನು ಬರ್ತಿನೋ , ಶಿವಾನಂದ ಪಾಟೀಲ ಬರ್ತಾರೋ, ಆದರೆ ಶಿವಾನಂದ ಪಾಟೀಲ ಈಗಾಗಲೇ ಅಪ್ಪನಿಗೆ ಹುಟ್ಟಿದ ಕೆಲ್ಸ ಮಾಡಿದ್ದಾರೆ, ನಾನು ಮಾಡಿದ್ರೂ ಬೇರೆ ಅಲ್ಲ, ಶಿವಾನಂದ ಪಾಟೀಲ ಮಾಡಿದ್ರೂ ಬೇರೆ ಅಲ್ಲ, ಸಚಿವರು ರಾಜೀನಾಮೆ ಕೊಟ್ಟಿದ್ದಾರೆ, ಯತ್ನಾಳ ಮೊದಲು ರಾಜೀನಾಮೆ ಕೊಡಲಿ, ಆಮೇಲೆ ಯುದ್ಧ ಇದೆ, ತೋರಸ್ತೀವಿ ಎಂದಿದ್ದಾರೆ.
ಯತ್ನಾಳ ಮಾತನಾಡೋ ಪದ ನೋಡಿದ್ರಿ, ಇವ್ರು ಲಿಂಗಾಯತ ಧರ್ಮದಲ್ಲಿ ಜನಿಸಿರೋ ಬಗ್ಗೆ ಅನುಮಾನ ಇದೆ, ಲಿಂಗಾಯತ ಧರ್ಮದಲ್ಲಿ ಅಣ್ಣ ಬಸವಣ್ಣನವರ ಸಂಸ್ಕಾರ ಇದೆ. ನಮಗೆ, ಇನ್ಮುಂದೆ ಇವರ ಚಿಲ್ಲರೆ ಮಾತಿಗೆ, ಚಿಲ್ಲರೆ ಭಾಷೆಗೆ ಉತ್ತರ ಕೊಡೋಕೆ ಹೋಗೋದಿಲ್ಲ, ನಾವು ಸಮಯಕ್ಕಾಗಿ ಕಾಯುತ್ತೇವೆ, ಸಮಯ ಬಂದಾಗ ತಕ್ಕಪಾಠ ಕಲಿಸುತ್ತೇವೆ, ಕಾಯ್ದು ನೋಡಿ ಎಂದು ಹೇಳಿದರು.ಯತ್ನಾಳ ಅವರು ಹುನಗುಂದ ಮತಕ್ಷೇತ್ರದಲ್ಲಿ ಕಾಶಪ್ಪನವರ ವಿರೋಧಿಗಳ ಮನೆಗೆ ಹೋಗಿ ಮಾತುಕತೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಶಪ್ಪನವರ, ನೋಡ್ರಿ, ಯತ್ನಾಳ ಬಂದು ನವಲಿ ಹಿರೇಮಠ, ದೊಡ್ಡನಗೌಡ ಪಾಟೀಲ) ಸೇರಿ ಯಾರ ಮನೆಗಾದ್ರೂ ಹೋಗಲಿ,
ಇದು ಬಿಟ್ಟು ಇನ್ನೊಬ್ಬರು ಮನೆಗಾದ್ರೂ ಹೋದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹುನಗುಂದ ಕ್ಷೇತ್ರಕ್ಕೆ ಯತ್ನಾಳ ಬಂದು ನಿಲ್ತೀನಿ ಅನ್ನೋದಾದ್ರೆ ಬಂದು ನಿಲ್ಲಲಿ, ತಾಕತ್ ಇದ್ರೆ 2028ಕ್ಕೆ ಹುನಗುಂದಕ್ಕೆ ಬಂದು ನಾಮಪತ್ರ ದಾಖಲಿಸಲಿ. ನಾನು ಏನು ಅಂತ ತೋರಸ್ತೀನಿ ಎಂದು ಸವಾಲು ಹಾಕಿದ್ದಾರೆ.