Breaking News

ಬೆಳಗಾವಿಯಲ್ಲಿ ಬಸವಜಯಂತಿ; ಚಿನ್ನದ ಉದ್ಯಮಿಯಿಂದ ಪಂಚಲೋಹದ ಕೊಡಂಚು ಉಡುಗೊರೆ!

Spread the love

ಬೆಳಗಾವಿಯಲ್ಲಿ ಬಸವಜಯಂತಿ; ಚಿನ್ನದ ಉದ್ಯಮಿಯಿಂದ ಪಂಚಲೋಹದ ಕೊಡಂಚು ಉಡುಗೊರೆ!
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಗ್ರಾಮೀಣ ಪ್ರದೇಶದ ರೈತ ಕುಟುಂಬ ಎತ್ತಿನ ಜೋಡಿಗಳಿಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಬಂಗಾರದ ಉದ್ಯಮಿ ಪಂಚಲೋಹದ ಬೆಳ್ಳಿಯ ಕೊಡಂಚು ಉಡುಗೊರೆಯಾಗಿ ನೀಡಿದ್ದಾರೆ‌.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಹಾಗೂ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಪ್ರಯುಕ್ತ ಎತ್ತುಗಳ ಭವ್ಯ ಮೆರವಣಿಗೆ ನಡೆಯಿತು‌. ಇದಕ್ಕೂ ಮುಂಚೆ ರೈತರು ತಮ್ಮ ತಮ್ಮ ಎತ್ತುಗಳಿಗೆ ಎತ್ತಿನ ಬಂಡೆಗಳನ್ನು ಅಲಂಕರಿಸಿ ಮೆರವಣಿಗೆ ಸಜ್ಜುಗೊಳಿಸಿ ಭವ್ಯ ಮೆರವಣಿಗೆ ನಡೆಸಿದ್ದಾರೆ.
ಇನ್ನೂ ದೇಶಕ್ಕೆ ಅನ್ನ ನೀಡುತ್ತಿರೋ ಬಸವಣ್ಣನ ಜಯಂತಿ ಅಂಗವಾಗಿ ಚಿನ್ನದ ಉದ್ಯಮಿ ಸುನೀಲ ವರ್ಣೇಕರ್ ಎಂಬುವವರು ಸಾಮಾಜಿಕ ಸೇವೆ ಸಲ್ಲಿಸಿದ್ದು 150ಕ್ಕೂ ಅಧಿಕ ಎತ್ತಿನ ಜೋಡಿಗಳಿಗೆ ಪಂಚಲೋಹದ ಕೊಡಂಚು ಉಡುಗೊರೆಯಾಗಿ ನೀಡಿದ್ದಾರೆ‌. ಅಷ್ಟೇಅಲ್ಲದೇ ಚಿನ್ನದ ಉದ್ಯಮಿಯಾಗಿರುವ ಸುನೀಲ ವರ್ಣೇಕರ್ ಸಾಮಾಜಿಕ ಸೇವೆಯಲ್ಲೂ ಸೈ ಎಂದಿದ್ದು ಸದಾವೊಂದಿಲೊಂದು ಸಾಮಾಜಿಕ ಕಾರ್ಯಗಳ ಮೂಲಕ ಹೆಸರು ಮಾಡಿರುವ ಚಿನ್ನದ ಉದ್ಯಮಿ ಸುನೀಲ ಭೂಮಿಯ ಒಡೆಯ ರೈತನಿಗೆ ಹಸಿರುಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಬಳಿಕ ಬೆಳ್ಳಿ ಸೇರಿದಂತೆ ಇತರ ಲೋಹಗಳನ್ನು ಬಳಸಿ ತಯಾರಿಸಿದ ಪಂಚಲೋಹದ ಕೊಡಂಚು ಉಡುಗೊರೆ ನೀಡಿದ್ದಾರೆ.ಕಾರ್ಯಕ್ರಮದಲ್ಲಿ ಅರ್ಜುನ ಕೆಂಪನ್ನವರ,ಶಿವಾನಂದ ಭೋಜಯ್ಯನವರ,ಸಚೀನ ಹುಂಬಿ, ಸಂಗಪ್ಪ ಬಾಗೇವಾಡಿ,ಪ್ರವೀಣ ಬಾಗೇವಾಡಿ,ವಿರೇಶ ಗುಡ್ಡದಮಠ,ಮಂಜುನಾಥ ಖನ್ನಪ್ಪನವರ,ಬಾಬಣ್ಣ ಖಂಡೋಜಿ,ಅನಿಲ ಕರಿಕಟ್ಟಿ ಸೇರಿ ಗ್ರಾಮಸ್ಥರು ಭಾಗಿಯಾಗಿದ್ದರು.

Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ