ನ್ಯಾಯಾಲಯಕ್ಕೆ ಸ್ವತಂತ್ರ ಕಟ್ಟಡ ನಿರ್ಮಿಸಲು ಜಮೀನು ಮಂಜೂರು
ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ಸತ್ಕರಿಸಿದ ನ್ಯಾಯವಾದಿ ಸಂಘ
ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ಸತ್ಕರಿಸಿದ ನ್ಯಾಯವಾದಿ ಸಂಘ ಕಾಗವಾಡ ಹೊಸ ತಾಲೂಕ ರಚನೆಯಾದ ಬಳಿಕ ನ್ಯಾಯಲಯ ಸ್ಥಾಪನೆಗೊಂಡಿದೆ. ಸದ್ಯಕ್ಕೆ ಎಪಿಎಂಸಿಯ ಶೇಡ್ಡಿನಲ್ಲಿ ಕಲಾಪ ಪ್ರಾರಂಭವಾಗಿದ್ದು. ಹೊಸ ಕಟ್ಟಡ ನಿರ್ಮಿಸಲು ನ್ಯಾಯವಾದಿ ಸಂಘದ ವತಿಯಿಂದ ಸತ್ಯಾಗ್ರಹ ಪ್ರಾರಂಭಿಸಿ ಸರ್ಕಾರವನ್ನು ಒತ್ತಾಯಿಸಲಾಗಿತ್ತು.
ಶಾಸಕ ರಾಜು ಕಾಗೆ ಅವರ ಪ್ರಯತ್ನದಿಂದ ಎಪಿಎಂಸಿಗೆ ನೀಡಿರುವ 2 ಎಕರೆ 20 ಗುಂಟೆ ಸ್ಥಳವನ್ನು ನ್ಯಾಯಾಲಯಕ್ಕಾಗಿ ಮಂಜೂರು ಮಾಡಲಾಗಿದೆ. ಈ ಹಿನ್ನೆಲೆ ಶಾಸಕ ರಾಜು ಕಾಗೆ ಅವರನ್ನು ನ್ಯಾಯವಾದಿಗಳ ಸಂಘದಿಂದ ಸತ್ಕರಿಸಲಾಯಿತು.
ಹಿರಿಯ ನ್ಯಾಯವಾದಿ ಅಭಯಕುಮಾರ ಅಕಿವಾಟೆ ಇವರು ಮಾತನಾಡಿ ಶಾಸಕ ರಾಜು ಕಾಗೆ ಅವರ ಪ್ರಯತ್ನದ ಫಲವಾಗಿ ಇಂದು ನ್ಯಾಯಾಲಯ ಆರಂಭಗೊಂಡಿದ್ದು, 2 ಎಕರೆ 20 ಗುಂಟೆ ಜಮೀನು ಮಂಜೂರುಗೊಳಿಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಪಿ ಎ ಮಾನೆ ಅವರು ಮಾತನಾಡಿ ಸದ್ಯ ಕಾಗವಾಡದಲ್ಲಿ ಎಪಿಎಂಸಿಯ ಶೇಡನಲ್ಲಿ ನ್ಯಾಯಾಲಯ ಕಾರ್ಯಕಲಾಪ ನಡೆಯುತ್ತಿತ್ತು. ಈಗ ಸ್ವತಂತ್ರ ಕಟ್ಟಡಕ್ಕೆ ಜಮೀನು ಮಂಜೂರುಗೊಳಿಸಿಲು ಶ್ರಮಿಸಿದ್ದಕ್ಕೆ ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ರಾಜು ಕಾಗೆ ಕಾಗವಾಡ ಸ್ವತಂತ್ರ ತಾಲೂಕು ಘೋಷಣೆಯಾದ ಬಳಿಕ ತಾಲೂಕಾ ಮಟ್ಟದ ಎಲ್ಲಾ ಇಲಾಖೆಯ ಕಚೇರಿಗಳು ಪ್ರಾರಂಭವಾಗಬೇಕಾಗಿದೆ. ಈಗಾಗಲೇ ಪ್ರಜಾಸೌಧ ಕಟ್ಟಡ ನಿರ್ಮಿಸಲು 8 ಕೋಟಿ 60 ಲಕ್ಷ ರೂಪಾಯಿ ಅನುದಾನ ಮಂಜೂರು ಗೊಂಡಿದೆ. ನ್ಯಾಯಾಲಯ ಕಟ್ಟಡ ನಿರ್ಮಿಸಲು ಸ್ಥಳದ ಬೇಡಿಕೆ ಇಟ್ಟಿದ್ದರಿಂದ ಸರ್ಕಾರದ ಗಮನಕ್ಕೆ ತಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಭೈರೆಗೌಡ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
ಈ ವೇಳೆ ನ್ಯಾಯವಾದಿ ಸಂಘದ ಉಪಾಧ್ಯಕ್ಷ ಬಾಹುಬಲಿ ಮಗದುಮ್ಮ, ಖಜಾಂಚಿ ಎಸ ಎಂ ಭರಮದೇ, ಎಂ ಜಿ ವಡರ, ಕುಮಾರಿ ಅಂಕಿತಾ ಪಾಟೀಲ, ಶುಭಂಗಿ ಚೌಗುಲೆ, ಅಭಯಕುಮಾರ ಹಾಕಿವಾಟಿ, ಎಸ ಬಿ ಪಾಟೀಲ, ಎಂ ಎ ಪಾಟೀಲ, ವೈ ಬಿ ಎಡುರೇ, ಎಸ್ ಬಿ ಸಿದ್ದೇವಾಡೆ, ಜೆ ಡಿ ಕುರೊಂದುವಾಡೆ, ಶಿವರಾಜ ಪಾಟೀಲ, ಅರವಿಂದ ಭಂಡಾರೆ, ಕುಮಾರಿ ಪ್ರೀತಿ ನಾಯಿಕ ಸೇರಿದಂತೆ ಅನೇಕರು ಇದ್ದರು.
Laxmi News 24×7