ಆದರ್ಶ ದಂಪತಿ, ಆದರ್ಶ ಅತ್ತೆ ಸೊಸೆ ಪ್ರಶಸ್ತಿ ನೀಡಿದ್ದು ಮಾದರಿ; ಸುಶ್ಮಿತಾ ಕ್ರಿಶ್ಚಾಲಿನ್
ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಮಿರಾಕಿ ಇಲಾಯಿಟ್ ಇವೆಂಟ್ಸ್ ವತಿಯಿಂದ ಮಹಿಳಾ ದಿನ
ನಗರದ ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನ ಹಾಗೂ ಮಿರಾಕಿ ಇಲಾಯಿಟ್ ಇವೆಂಟ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಆದರ್ಶ ದಂಪತಿ, ಆದರ್ಶ ಅತ್ತೆ ಸೊಸೆ, ಮಹಿಳಾ ಸಂಗೀತ ವಿದೂಷಕಿ ಪ್ರಶಸ್ಥಿ, ಅವಾರ್ಡ ಆಫ್ ಎಕ್ಸಲೆನ್ಸ್ ಪ್ರಶಸ್ಥಿ ವಿತರಣೆ, ಕಲಾಬಿಂಬ ವಸ್ತು ಪ್ರದರ್ಶನ ಮಾರಾಟ ಮಳಿಗೆ, ಕಿಡ್ಸ್ ಫ್ಯಾಶನ್ ಶೋ, ಕರೊಕೆ ಸಂಗೀತ ಸ್ಪರ್ಧೆ, ಹಾಗೂ ಮಹಿಳಾ ಫ್ಯಾಶನ್ ಶೋ ಆಯೋಜಿಸಲಾಗಿತ್ತು.
ಜ್ಯೋತಿ ಬೆಳಗುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ “ಉಮನ್ ಎಂಟರಪ್ರನೌನರ-2024” ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಶ್ರೀಮತಿ ಸುಶ್ಮಿತಾ ಕ್ರಿಶ್ಚಾಲಿನ್‌ರವರು, ಈ ಸಂಸ್ಥೆಗಳ ಕಾರ್ಯಗಳನ್ನು ಶ್ಲಾಘಿಸುತ್ತಾ ಇಂದಿನ ಪೀಳಿಗೆಯ ವಿವಾಹಿತರಲ್ಲಿ ಕುಟುಂಬ ಸಾಮರಸ್ಯವಿಲ್ಲದೆ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಇದನ್ನು ಮನಗಂಡು ಆದರ್ಶ ದಂಪತಿ, ಆದರ್ಶ ಅತ್ತೆ ಸೊಸೆ ಪ್ರಶಸ್ಥಿಗಳನ್ನು ನೀಡಿ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತಿರುವದು ಅತ್ಯಂತ್ಯ ಪ್ರಶಂಶನೀಯವಾದದ್ದು ಎಂದರು.
ಕಮೀಶನರ್ ಆಫ್ ಪೊಲೀಸ್, ಮಾರ್ಟಿನ್ ಮರ್ಬನಿಯಾಂಗ ವಿಶೇಷ ಆವ್ಹಾನಿತರಾಗಿ ಆಗಮಿಸಿದ್ದರು. “ಅವಾರ್ಡ ಆಫ್ ಎಕ್ಸಲೆನ್ಸ್” ಪ್ರಶಸ್ತಿಯನ್ನು ಸುಶ್ಮಿತಾ ಕ್ರಿಶ್ಚಾಲಿನ್, “ಆದರ್ಶ ದಂಪತಿ” ಪ್ರಶಸ್ತಿಯನ್ನು ಶ್ರೀಮತಿ ಮಂಗಲ ಶ್ರೀ ಗುರುವಯ್ಯಾ ಕಾಗತಿಕರ, “ಆದರ್ಶ ಅತ್ತೆ ಸೊಸೆ” ಪ್ರಶಸ್ತಿಯನ್ನು ರಶ್ಮಿ ಚೌಗಲೆ, ಪದ್ಮಾವತಿ ಚೌಗಲೆ ಹಾಗೂ “ಪ್ರತಿಭಾ ಪುರಸ್ಕಾರ ಪ್ರಶಸ್ತಿ”ಯನ್ನು ಸಿತಾರವಾದಕಿ ಅರುಂಧತಿ ಸುಖಟನಕರ ಇವರಿಗೆ ಕೊಡಮಾಡಿ ಸತ್ಕರಿಸಲಾಯಿತು.
ಪ್ರೇಮಾ ಉಪಾಧ್ಯೆ ಮನಮೋಹಕ ನೃತ್ಯ ಪ್ರದರ್ಶನ ಮಾಡಿದರು. ಅಶ್ವಿನಿ ಶಂಕರಗೌಡರ, ರೇಷ್ಮಾ ದಿವಟೆ, ವಾಣಿ ಕಾರೆಕರ, ಅಶ್ವಿನಿ ಮಲಘಾನ, ಶೃದ್ಧಾ ಜಕ್ಕನ್ನವರ ಇವರು ಕಿಡ್ಸ್ ಫ್ಯಾಶನ್ ಶೋ. ಹಾಗೂ ಮಹಿಳಾ ಫ್ಯಾಶನ್ ಶೋ, ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ರೋಹಿಣಿ ಇಂಡಿ, ದರ್ಶನಾ ನಿಲಜಗಿ, ಪದ್ಮಜಾ ತುರಮಂದಿ, ಇವರ ಸ್ವಾಗತ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಅಧ್ಯಕ್ಷೆ ಮಂಗಲಾ ಮಠದ ಎಲ್ಲರನ್ನು ಸ್ವಾಗತಿಸಿದರು. ಕ್ರಾಂತಿ ಮಹಿಳಾ ಮಂಡಳದ ಕಾರ್ಯದರ್ಶಿ ಭಾರತಿ ರತ್ನಪ್ಪಗೊಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಥಿತಿ ಪರಿಚಯವನ್ನು ತ್ರಿಶಿಲಾ ಪಾಯಪ್ಪನವರ, ಅಕ್ಷತಾ ಪಾಟೀಲ ಮಾಡಿದರು. ಪುಷ್ಪಾ ನಿಲಜಗಿ ರಾಜಶ್ರೀ ಕಾಗವಾಡ ಕಾರ್ಯಕ್ರಮವನ್ನು ನಿರೂಪಿಸಿದರು. ಮಮತಾ ಪತ್ರಾವಳಿ ವಂದನಾರ್ಪಣೆ ಮಾಡಿದರು