Breaking News

ಟಿಕೆಟ್ ವಿಚಾರವಾಗಿ  ಈಗಾಗಲೇ ನನ್ನ ಹೆಸರು ಕೇಳಿ ಬಂದಿದೆ.  ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಸುತ್ತಿದ್ದಾರೆ:ಸತೀಶ ಜಾರಕಿಹೊಳಿ

Spread the love

ಬೆಳಗಾವಿ:   ಜಿಲ್ಲೆಯ ಶಾಸಕರು ಹಾಗೂ   ಹಿರಿಯ  ನಾಯಕರೊಂದಿಗೆ ಚರ್ಚಿಸಿ ಲೋಕಸಭಾ ಉಪಚುನಾವಣೆ ಸೂಕ್ತ ಅಭ್ಯರ್ಥಿಯನ್ನು   ಅಂತಿಮಗೊಳಿಸಲಾಗುವುದು  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಕೆಟ್ ವಿಚಾರವಾಗಿ  ಈಗಾಗಲೇ ನನ್ನ ಹೆಸರು ಕೇಳಿ ಬಂದಿದೆ.  ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಸುತ್ತಿದ್ದಾರೆ ಮತ್ತು ಸಹಜವಾಗಿಯೂ ಆಗಿದೆ. ಬೆಂಗಳೂರಿನಲ್ಲಿ ಕುಳಿತು ಹೇಳಲು ಸಾಧ್ಯವಿಲ್ಲ. ಕಮಿಟಿ ಇದೆ.  ಇನ್ನೊಂದು ಬಾರಿ‌ ಸಭೆ ನಡೆಸಿ ಬೆಳಗಾವಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಯೇ ಅಂತಿಮವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್  ಸದಸ್ಯರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ,  ಕೆಲವು ಕಾಂಗ್ರೆಸ್ ಸದಸ್ಯರು  ಅಧ್ಯಕ್ಷರಿಗೆ ರಾಜೀನಾಮೆ ನೀಡಿರುವ ಮಾಹಿತಿ ಇದೆ. ಆದ್ರೆ ಅವರು ಬಿಜೆಪಿ ಪಕ್ಷಕ್ಕೆ ಸೇರಿಲ್ಲ. ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಜೂನ್ ತಿಂಗಳಲ್ಲಿ  ಚುನಾವಣೆ ಬರಲಿದ್ದು, ನಾವು ಚುನಾವಣೆಗೆ  ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು


Spread the love

About Laxminews 24x7

Check Also

ಜಿಬಿಎ 5 ನಗರ ಪಾಲಿಕೆಯ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

Spread the loveಬೆಂಗಳೂರು: ಜಿಬಿಎ  ವ್ಯಾಪ್ತಿಯ 5 ನಗರ ಪಾಲಿಕೆಯ ವಾರ್ಡ್‌ಗಳಿಗೆ ಮೀಸಲಾತಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 8ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ