ಕಾಗವಾಡ ತಾಲೂಕಿನ ಉಗಾರ ಪುರಸಭೆಯಲ್ಲಿ ಸನ್ 2025-26 ಸಾಲಿನ ಬಜೆಟ್ ಮಂಡನೆ ನೆರವೇರಿತು.
.
ಕಾಗವಾಡ ತಾಲೂಕಿನ ಉಗಾರ ಪುರಸಭೆಯ ಸನ 2025-26 ಸಾಲಿನ 35 ಲಕ್ಷ 57 ಸಾವಿರ ರೂಪಾಯದ ಉಳಿತಾಯ ಬಜೆಟ ಪುರಸಭೆ ಮುಖ್ಯ ಅಧಿಕಾರಿ ಎಂ ಆರ ನದಾಫ ಮಂಡನೆ ಮಾಡಿದರು.
ಸೋಮವಾರ ರಂದು ಉಗಾರ ಪುರಸಭೆಯಲ್ಲಿ ಬಜೆಟ್ ಮಂಡನೆ. ಪುರಸಭೆ ಅಧ್ಯಕ್ಷೆ ಶ್ರೀಮತಿ ಫಾತಿಮಾ ನದಾಫ ಇವರ ಅಧ್ಯಕ್ಷತೆಯಲ್ಲಿ ಸಭೆ ಜರಿಗಿತು.
ಮುಖ್ಯ ಅಧಿಕಾರಿಗಳಾದ ಎಂ ಆರ ನದಾಫ ಇವರು ವರ್ಷದಲ್ಲಿ 13.43
ಕೋಟಿ ರೂಪಾಯಿ ಸರ್ಕಾರ ಹಾಗೂ ಬೇರೆ ಬೇರೆ ಯೋಜನೆಗಳ ಮುಖಾಂತರ ಜಮಾ ವಾಗಿದ್ದು ಅದರಲ್ಲಿಯೇ ಪಟ್ಟಣದ ಅಭಿವೃದ್ಧಿಗಾಗಿ ಬೇರೆ ಬೇರೆ ಯೋಜನೆಗಳು ಗ್ರೂಪಿಸಿ 13.42 ಕೋಟಿ ರೂಪಾಯಿ ವೆಚ್ಚವಾಗಿದೆ, 35 ಲಕ್ಷ 57 ಸಾವಿರ ಉಳಿತಾಯ ಬಜೆಟ ಮಂಡಿಸುತ್ತೇನೆ ಎಂದು ಹೇಳಿ ಸಭೆಯ ಸದಸ್ಯರು ಒಪ್ಪಿಗೆ ಪಡೆದುಕೊಂಡರು.
ರಾಜ್ಯ ಸರ್ಕಾರದ ಎಸ. ಎಫ. ಸಿ. ಯೋಜನೆ ಅಡಿಯಲ್ಲಿ ಎಸಿಪಿ -ಟಿಎಸ್ಪಿ ಯೋಜನೆ ಮುಖಾಂತರ ಆಯ್ಕೆಗೊಂಡ ಬಲಾವಣೆ ಗಳಿಗೆ 8 ಹೊಲಿಗೆ ಯಂತ್ರಗಳು, ಐದು ತ್ರಿಚಕ್ರ ವಾಹನ ಕಸ ವಿಲ್ಲಿವಾರಿಗಾಗಿ ಹತ್ತು ಸಾವಿರ ಡಸ್ಟ್ ಬಿನ ವಿತರಣೆ ಕಾರ್ಯಕ್ರಮ ಜರುಗಿತು.
ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಇವರ ಬರೆದ ಸಂವಿಧಾನ ಪುಸ್ತಕ, ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ ಇವರ ಆತ್ಮಚರಿತ್ರದ ಗ್ರಂಥಗಳು ಅಳಿಯ ಫ್ಯಾಬ್ರಿಗೇ ನೀಡಲಾಯಿತು.
ಸಭೆಯಲ್ಲಿ ಉಗಾರ ಪಟ್ಟಣದ ವ್ಯಾಪ್ತಿಯಲ್ಲಿ ಇರುವ ಕುಟುಂಬಗಳ ಮನೆಗಳ ಕರವಸಲಾತಿ ಮಾಡಬೇಕು, ಸ್ಥಳೀಯ ಉಗಾರ ಸಕ್ಕರೆ ಕಾರ್ಖಾನೆಯಿಂದ ಆಸ್ತಿಗಳ ನೋಂದಣಿ ಮಾಡಿಕೊಂಡು ಸರ್ಕಾರದ ಬರುವ ಕರುವ ಸುಲಾತಿ ಕಡ್ಡಾಯವಾಗಿ ಮಾಡಲೇಬೇಕು ಈ ವಸೂಲತಿಗಾಗಿ ಸಮಿತಿ ನೇಮಿಕೆ ಮಾಡಬೇಕೆಂದು ಗೊತ್ತುವಳೇ ಮಂಡಿಸಿದರು.
ಉಗಾರ ಪಟ್ಟಣದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿಗಳ ನಿರ್ಮಾಣ ಹಾಗೂ ಅನಧಿಕುರ್ತಿವಾಗಿ ನಲ್ಲಿಗಳಿಂದ ನೀರು ಬಳಸುತ್ತಿರುವವರನ್ನು ಗುರುತಿಸಿ ದಂಡ
ವಸುಲಾತಿ ಮಾಡಬೇಕೆಂದು ಪುರಸಭೆ ಸದಸ್ಯರಾದ ಅಶೋಕ್ ಕಾಂಬಳೆ, ಮಾದೇವ ಒಡಗಾವೆ ಗಂಗಾಧರ ಜ್ವೂರಾಪುರೆ, ಪ್ರದೀಪ್ ಚಿಂಚವಾಡೆ, ಪ್ರಫುಲ್ ಥೂರುಷೆ, ಪ್ರಕಾಶ್ ರೂರುಷಿ , ಪ್ರತಾಪ ಜಾತ್ರಾಟಿ, ವಿಕ್ರಂ ಧನಗರ ಹರುಣ, ಮುಲ್ಲಾ,ರಾಜು ಪಾಟೀಲ್, ವೀರಭದ್ರ ಕಟಗೇರಿ ಸೇರಿದಂತೆ ಅನೇಕ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಅಧಿಕಾರಿಗಳಿಗೆ ಅನೇಕ ಪ್ರಶ್ನೆಗಳು ವಿಚಾರಿಸಿದರು.
ಮಹಿಳಾ ಸದಸ್ಯರಾದ ಪದ್ಮ ಕಾವೇರಿ ರಾಧಿಕಾ ಗುರವ, ಹೀನಾ ಶೇಕ, ರೂಪಾ ದೇಸಿಂಗೆ, ಆರತಿ ಜಗತಾಪ, ವರ್ಷಾ ನಾಯಿಕ, ಸೋನಾ ಬಾಯಿ ಸಾಂಗಾವೆ ಸೇರಿದಂತೆ ಅನೇಕ ಮಹಿಳಾ ಸದಸ್ಯರು ತಮ್ಮ ವಾರ್ಡಗಳಲ್ಲಿ ಕುಡಿಯುವ ನೀರು ವಿದ್ಯುತ್ ದೀಪ ಮುಂತಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ವಾದಿವಾದಕ್ಕೆ ನಿಂತರು. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು ಬರುವ ಏಪ್ರಿಲ ತಿಂಗಳಿನಿಂದ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಜಿಲ್ಲಾ ಅಧಿಕಾರಿಗಳಿಗೆ ಗಮನಕ್ಕೆ ಈ ವಿಷಯ ಮಂಡಿಸಬೇಕೆಂದು ಸದಸ್ಯರು ಹೇಳಿದರು.
ಪುರಸಭೆ ಅಧ್ಯಕ್ಷ ಫಾತಿಮಾ ನದಾಫ ಉಪಾಧ್ಯಕ್ಷ ಸತೀಶ ಜಗತಾಪ ಅದೇಂತರಾದ ದಸ್ತಗಿರ ಪಠಣ, ಕಂದಾಯ ಅಧಿಕಾರಿ ಶ್ರೀಮತಿ ಭಾರತಿ ಮಾಡಲಗಿ, ಸಂತೋಷ ದೊಂಡರೆ, ಆಕಾಶ್ ಕಾಂಬಳೆ ಇವರು ಉತ್ತರಿಸಿದರು.
LAXMINEWS