ರಾಯಬಾಗ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸಭೆಯಲ್ಲಿ ದಿನಾಂಕ 20 ರಂದು ಕರೆದಿದ್ದ ಸಾಮಾನ್ಯ ಸಭೆ ಯುದ್ಧಕಾಂಡವಾಗಿ ಪರಿಣಮಿಸಿದೆ. ಗುರುವಾರ ಮುಂಜಾನೆ 11 ಗಂಟೆಗೆ ಪುರಸಭೆ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಪುರಸಭೆಯ ಕಚೇರಿಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. 2025-26ನೇ ಸಾಲಿನ ಸಂತೆ ಕರ ಬಹಿರಂಗ ಹರಾಜು ಮಾಡುವ ವಿಷಯವು ಅಜೆಂಡದಲ್ಲಿ ಇತ್ತು.
ಇಲಾಖೆಯ ನಿಯಮದಂತೆ 4 ಜನರು ಹರಾಜಿನಲ್ಲಿ ಭಾಗವಹಿಸಬೇಕೆನ್ನುವುದು ಅಧಿಕಾರಿಗಳ ಹಾಗು ಸರ್ವ ಸದಸ್ಯರ ಮಾತಾಗಿತ್ತು. ಆದರೆ ಈ ಹರಾಜು ವಿಷಯ ನಮಗೆ ವಿಳಂಭವಾಗಿ ತಿಳಿದಿದೆ. ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಸಮಯ ಪಾಲನೆ ಮಾಡಿಲ್ಲ ಎಂದು ಚೇತನ ನಡುವಿನಕೇರಿ ಹಾಗು ಸಂತೋಷ ಅರಭಾವಿ ಸಭೆಯ ಮಧ್ಯ ಪ್ರವೇಶಿಸಿ ಪ್ರಶ್ನೆ ಮಾಡಿದರು. ವೇಳೆ ಅಧಿಕಾರಿ, ಪುರಸಭೆ ಸದಸ್ಯರು ಹಾಗು ಸಭೆಯ ಮಧ್ಯ ಪ್ರವೇಶ ಮಾಡಿದವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಸಭೆಯ ಮಧ್ಯ ಪ್ರವೇಶಿಸಿ ಅಸಭ್ಯವಾಗಿ ನಡೆದುಕೊಂಡು ಟೇಬಲ್ ಕುಟ್ಟಿ ಮಾತನಾಡಿದ್ದು ಸರಿಯಲ್ಲ ಇದು ನಿಯಮ ಭಾಹಿರವೆಂದು ಆಕ್ರೋಷ ವ್ಯಕ್ತಪಡಿಸಿದ ಪುರಸಭೆ ಸದಸ್ಯ ಮಂಗಲಾ ಪಣದಿ ಸಭೆಯಿಂದ ಪಲಾಯಣ ಮಾಡಿದರ. ಪುರಸಭೆ ಮುಖ್ಯಾಧಿಕಾರಿಗಳು ಸ್ಪಷ್ಟನೆ ನೀಡಿ, ನಾವು ಕಚೇರಿಯ ನಿಯಮಾನುಸಾರ ಸಭೆ ನಡೆಸಿದ್ದು, ಸಭೆಯ ಮಧ್ಯ ಪ್ರವೇಶಿಸಿ ಮಾಹಿತಿ ಕೊಡಿ ಎಂದು ಕೇಳುವುದು ಸರಿಯಲ್ಲ
ಮತ್ತು ಹರಾಜು ಪ್ರಕ್ರಿಯೆ ಕುರಿತು ಪಟ್ಟಣದ ತುಂಬೆಲ್ಲ ಜಾಹೀರಾತು ಕೂಡ ಹಂಚಲಾಗಿದೆ ಎಂದು ಹೇಳಿದ್ದಾರೆ. ಆದರೆ ಸಭೆಯ ಮಧ್ಯ ಭಾಗವಹಿಸಿದ ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಕೆಲವರ ವಾಡಿಸುತಿದ್ದಾರೆ. ಆದರೆ ಯಾವುದು ಸರಿ? ಯಾವುದು ತಪ್ಪು ಎನ್ನುವುದನ್ನು ಮೇಲಾಧಿಕಾರಿಗಳೇ ಸ್ಪಷ್ಟಪಡಿಸಬೇಕಿದೆ.