Breaking News

ಒಂದೇ ಬಾರಿ ಎರಡು ಮದುವೆಯಾಗಿದ್ದ ವ್ಯಕ್ತಿಯೋರ್ವ ತನ್ನ ಓರ್ವ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಆಕೆಯನ್ನು ಕೊಂದು ಹಾಕಿದ್ದಾನೆ.

Spread the love

ಆನೇಕಲ್​​​(ಬೆಂಗಳೂರು): ಎರಡೆರಡು ಮದುವೆಯಾಗಿದ್ದ ಪತಿ ಓರ್ವ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ರಾಚಾಮಾನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅನಿತಾ (29) ಮೃತ ಮಹಿಳೆ. ಬಾಬು (32) ಪತ್ನಿ ಕೊಂದ ಹಂತಕ.

ಘಟನೆಯ ವಿವರ: 9 ವರ್ಷಗಳ ಹಿಂದೆ ಬಾಬು ಇಬ್ಬರು ಯುವತಿಯರನ್ನು ಪ್ರೀತಿಸಿ, ಒಂದೇ ದಿನ ಇಬ್ಬರಿಗೂ ತಾಳಿ ಕಟ್ಟಿದ್ದ. ಈ ಪೈಕಿ ಓರ್ವ ಪತ್ನಿ ಅನಿತಾ ಮೈಸೂರಿನ ಚಿಕ್ಕ ಮಾರ್ಕೆಟ್​ನವರು. ಪತಿ ತನ್ನ ಮೇಲೆ ದಿನನಿತ್ಯ ಅನುಮಾನ ವ್ಯಕ್ತಪಡಿಸುತ್ತಿದ್ದುದರಿಂದ ಆತನೊಂದಿಗೆ ಜಗಳವಾಡಿ ನೊಂದು ಒಂದು ತಿಂಗಳು ಮನೆ ಬಿಟ್ಟಿದ್ದರು. ಕಳೆದ ವಾರ ಬಾಬು ಕುಟುಂಬಸ್ಥರು ಆಕೆಯ ಮನವೊಲಿಸಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದರಂತೆ.

ಆದರೆ, ಮತ್ತದೇ ಕ್ಯಾತೆ ತೆಗೆದ ಬಾಬು, ಅನಿತಾ ಜೊತೆ ಸೋಮವಾರ ರಾತ್ರಿ ಜಗಳ ಮಾಡಿದ್ದಾನೆ. ಈ ವೇಳೆ ಹಿಟ್ಟಿನ ದೊಣ್ಣೆ ಮತ್ತು ಕೈಯಿಂದ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ರಾತ್ರಿ ನಿದ್ರಿಸುತ್ತಾ ಬೆಳಗಾಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಬಾಬು ಅತ್ತಿಬೆಲೆ ಪೊಲೀಸರ ವಶದಲ್ಲಿದ್ದಾನೆ.


Spread the love

About Laxminews 24x7

Check Also

ಬಜೆಟ್ ನಲ್ಲಿ ಸಾರಿಗೆ ಇಲಾಖೆಗೆ ಸಿಕ್ಕಿದ್ದೇನು?

Spread the loveಶಕ್ತಿ ಯೋಜನೆಗೆ 5,300 ಕೋಟಿ ರೂ. ಸಾರಿಗೆ ಸಿಬ್ಬಂದಿ ವೇತನ ಬಾಕಿ ಪಾವತಿಗೆ 1,271 ಕೋಟಿ ರೂ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ