ಧಾರವಾಡದಲ್ಲಿ ಪುಂಡರಿಗೆ ಕ್ಲಾಸ್, ಬಿಸಿ ಮುಟ್ಟಿಸಿದ ವಿದ್ಯಾಗಿರಿ ಪೊಲೀಸರು…….ದಂಡಾಸ್ತ್ರ ಮೂಲಕ ಖಡಕ್ ಎಚ್ಚರಿಕೆ
ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿದ್ದ, ಸುಮಾರು 70ಕ್ಕೂ ಹೆಚ್ಚು ಯುವಕರನ್ನು ಧಾರವಾಡ ವಿದ್ಯಾಗಿರಿ ಠಾಣೆಗೆ ಕರೆತಂದ ಪೊಲೀಸರು ಅವರಿಗೆ ಬಿಸಿ ಮುಟ್ಟಿಸಿದ್ದಾರೆ.
ನಗರದ ತೇಜಸ್ವಿ ನಗರ ಮಾಳಮಡ್ಡಿ ಸೇರಿದಂತೆ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದೇ ಸುತ್ತಾಡುತ್ತಿದ್ದ 15 ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ಪುಡಾರಿಗಳಿಗೆ ಬುದ್ಧಿವಾದ ಹೇಳಿದರು. ತ್ರಿಬಲ್ ರೈಡಿಂಗ್ ಮಾಡುತ್ತಿದ್ದ ಹಾಗೂ ಸಾರ್ವಜನಿಕರ ಸ್ಥಳದಲ್ಲಿ ನಿಂತು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದವರನ್ನು ಠಾಣೆಯ ಸಭಾಭವನಕ್ಕೆ ಕರೆತಂದು ದಂಡ ಹಾಕಿ ಅಂತವರಿಗೆ ದಂಡಾಸ್ತ್ರ ಮೂಲಕ ಪೊಲೀಸರು ಬುದ್ಧಿವಾದ ಹೇಳಿ ಖಡಕ್ ಸಂದೇಶ ನೀಡಿದ್ದಾರೆ.