ಗುತ್ತಿಗೆದಾರರಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಸಚಿವ ಸತೀಶ್ ಜಾರಕಿಹೊಳಿ
ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುತ್ತಿಗೆದಾರ ಬಾಕಿ ಬಿಲ್ಲನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಸದನದಲ್ಲಿ ಸಚಿವರನ್ನು ಆಗ್ರಹಿಸಿದರು
ಈ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪ್ರಶ್ನೆ ಮಾಡಿದ ಅವರು 2024-25 ಸಾಲಿನಲ್ಲಿ ಇಲಾಖೆಯಿಂದ ಮೀಸಲಿಟ್ಟ ಅನುದಾನ10 ಸಾವಿರದ23 ಕೋಟಿ ಎಂದು ತೋರಿಸಲಾಗಿದೆ 25 ಫೆಬ್ರುವರಿವರೆಗೆ ಬಿಡುಗಡೆಯಾದ ಹಣ ಎಷ್ಟು ಬಾಕಿ ಇರುವ ಹಣವೆಷ್ಟು ಎಂದು ಕೇಳಲಾಗಿದೆ ಅದರಲ್ಲಿ8392ಕೋಟಿ ಅನುದಾನ ಬಿಡುಗಡೆಯಾಗಿದೆ ಆದರೆ ಸರ್ಕಾರ 8925 ಕೋಟಿ ಬಾಕಿ ಉಳಿಸಿಕೊಂಡಿದೆ ಅಂದರೆ ಇನ್ನೂ 20% ಹಣ ಬಿಡುಗಡೆಯಾಗಿಲ್ಲ ಇದಕ್ಕೆ ಕಾರಣವೇನು ಇಲಾಖೆಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣವಿಲ್ಲವೇ ಸಚಿವರು ನನಗೆ ಸ್ಪಷ್ಟನೆ ನೀಡಬೇಕು 8925 ಕೋಟಿ ಬಿಲ್ ಬಾಕಿ ಇದೆ ಎಂದು ಹೇಳಿದ್ದೀರಿ ಗುತ್ತಿಗೆದಾರರು ಯಾವ ರೀತಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬ ಕಲ್ಪನೆ ನಿಮಗೂ ಇದೆ ಸ್ಪಷ್ಟನೆ ನೀಡಿ ಎಂದರು
ಇದಕ್ಕೆ ಪ್ರತಿಕ್ರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ 24 ನೇ ಸಾಲಿನಲ್ಲಿ 10 ಸಾವಿರದ24 ಕೋಟಿ ಅನುದಾನ ನಮ್ಮ ಇಲಾಖೆಗೆ ಬಂದಿದೆ ಅದರಲ್ಲಿ ಇಲ್ಲಿಯವರೆಗೆ 80992 ಬಿಡುಗಡೆ ಮಾಡಿದ್ದೀವಿ ಬಾಕಿ1400 ಕೋಟಿ ಇದೆ. ಈ ಹಿಂದಿನ ಬಜೆಟ್ ಅನುದಾನ ಇಲ್ಲದೆ ಕೆಲಸ ಮಾಡಲಾಗಿದ್ದು ಅದರಿಂದ ವ್ಯತ್ಯಾಸವಾಗಿ ಬಾಕಿ ಉಳಿದುಕೊಂಡಿದೆ ಬಾಕಿ ತೀರಿಸಲು ಸರ್ಕಾರ ಬದ್ಧವಾಗಿದ್ದು ಒಮ್ಮೆಲೇ ಕೊಡಲು ಆಗುವುದಿಲ್ಲ ಹಂತ ಹಂತವಾಗಿ ಮಾರ್ಚ ನಂತರ ಕೊಡುವ ವ್ಯವಸ್ಥೆ ಮಾಡುತ್ತೇವೆ ನಿರ್ದಿಷ್ಟ ಸಮಯ ಹೇಳಲಿಕ್ಕಾಗದು ಹಣಕಾಸು ಇಲಾಖೆಯ ಸಾಧಕ ಬಾದಕ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು