Breaking News

ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ…….7 ಯುವತಿಯರು ಸೇರಿದಂತೆ 18 ಜನ ಅರೆಸ್ಟ್,…..

Spread the love

ಲಕ್ನೊ: ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 7 ಯುವತಿಯರು ಸೇರಿದಂತೆ 18 ಜನರನ್ನ ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ ಕಾರ್ಯಚರಣೆ ನಡೆಸಿದ್ದ ಗ್ರೇಟರ್ ನೋಯ್ಡಾದ ಕೋತವಾಲಿಯ ಬೀಟಾ-2 ಪೊಲೀಸರು 18 ಜನರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರೇಟರ್ ನೋಯ್ಡಾದ ಜಗತ್ ಫಾರಂನೊಳಗೆ ಸ್ಪಾ ಹೆಸರಿನಲ್ಲಿ ಅನೈತಿಕ ಚುಟವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರುಗಳ ಬಂದ ಹಿನ್ನೆಲೆ ಡಿಸಿಪಿ ರಾಜೇಶ್ ಕುಮಾರ್ ಸಿಂಗ್ ಸ್ಪಾ ಮೇಲೆ ದಾಳಿ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಆದೇಶಿಸಿದ್ದರು.

ಡಿಸಿಪಿ ಆದೇಶದ ಮೇರೆಗೆ ಸ್ಟಾ ಸೆಂಟರ್ ಮೇಲೆ ದಾಳಿ ನಡೆಸಿದ್ದ ಎಸ್‍ಹೆಚ್‍ಓ ಸುಜಿತ್ ಉಪಾದ್ಯಯ್ ನೇತೃತ್ವದ ತಂಡ ಸೆಕ್ಸ್ ನಲ್ಲಿ ತೊಡಗಿದ್ದ ಜೋಡಿಗಳನ್ನ ಹಿಡಿದಿದೆ. ದಾಳಿ ನಡೆಯುತ್ತಿದ್ದಂತೆ ಬೆಚ್ಚಿದ ಯುವಕ-ಯುವತಿಯರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ಪೊಲೀಸರು ಎಲ್ಲರನ್ನ ಬಲೆಯಲ್ಲಿ ಸೆರೆ ಹಿಡಿದಿದ್ದಾರೆ.

ಸ್ಪಾ ಅಡ್ಡದಲ್ಲಿ 18 ಮೊಬೈಲ್, 1,14,019 ರೂ. ನಗದು, 2 ಡಿವಿಆರ್, ಗ್ರಾಹಕರ ರಿಜಿಸ್ಟರ್ ಬುಕ್, ಕಾಂಡೋಮ್ ಮತ್ತು ಕೆಲ ವಯಾಗ್ರ ಮಾತ್ರೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

About Laxminews 24x7

Check Also

ಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

Spread the loveಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ! ಬಾಗಲಕೋಟೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ