ಶಾಸಕ ಆಸೀಫ್ ಸೇಟ್ ಫೌಂಡೇಶನ್ ವತಿಯಿಂದ ಬೆಳಗಾವಿಯ ಅಶೋಕ್ ನಗರ ಸೇರಿದಂತೆ ಒಟ್ಟು ಐದು ಬಡಾವಣೆಗಳಲ್ಲಿಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು
ಅಶೋಕನಗರದ ಉರ್ದು ಶಾಲೆ ಸೇರಿದಂತೆ ಒಟ್ಟು ಐದು ಬಡಾವಣೆಗಳಲ್ಲಿ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ತಜ್ಞ ವೈದ್ಯರು ರೋಗಿಗಳನ್ನು ತಪಾಸನೆ ಮಾಡಿ ಚಿಕಿತ್ಸೆಯ ಸಲಹೆ ಸೂಚನೆಗಳನ್ನು ನೀಡಿದರು
ಶಿಬಿರದಲ್ಲಿ ಔಷಧಗಳನ್ನೂ ಸಹ ಉಚಿತವಾಗಿ ನೀಡಲಾಯಿತು
ಈ ಸಂದರ್ಭದಲ್ಲಿ ಶಿಬಿರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಾಸಕ ಆಸಿಫ್ ಸೇಠ ಅವರ ಪುತ್ರ ಅಮಾನ್ ಸೇಟ್ ಅವರು ಇನ್ ನ್ಯೂಸ್ ನೊಂದಿಗೆ ಮಾತನಾಡಿ, ಶಾಸಕ ಆಸೀಫ ಸೇಟ್ ಅವರು ಜನರಿಗೆ ಭರವಸೆ ನೀಡಿರುವಂತೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಿದ್ದಾರೆ ಆ ನಿಟ್ಟಿನಲ್ಲಿ ಇಂದು ಬೆಳಗಾವಿ ನಗರದ ರಾಮತೀರ್ಥ ನಗರ ಅಜಂನಗರ್ ರುಕ್ಮಿಣಿ ನಗರ ಅಶೋಕನಗರ ಮತ್ತು ಖಂಜರ್ ಗಲ್ಲಿಯಲ್ಲಿ ಆಸೀಫ್ ಸೇಟ್ ಫೌಂಡೇಶನ್ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದ್ದು ತಜ್ಞವೈದ್ಯರು ಶಿಬಿರದಲ್ಲಿ ರೋಗಿಗಳನ್ನು ತಪಾಸಿಸಿ ಉಚಿತ ಔಷಧ ಉಪಚಾರ ಮಾಡುತ್ತಿದ್ದಾರೆ ಈಗಾಗಲೇ 500 ಕಿಂತ ಹೆಚ್ಚು ನಾಗರಿಕರು ತಪಾಸನೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದು ಶಿಬಿರ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ಅಪರೂಪದ ಖಾಯಿಲೆಗಳಿಗಾಗಿ ವಿಶೇಷ ವೈದ್ಯಕೀಯ ಶಿಬಿರಗಳನ್ನು ಆಯೋಜನೆ ಮಾಡುವ ಯೋಚನೆ ಇದೆಎಂದು ಹೇಳಿದರು
ಇನ್ನು ಶಿಬಿರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅಶೋಕ ನಗರದ ಉರ್ದು ಶಾಲೆಯ ಪದಾಧಿಕಾರಿ ಜಮಾಲಪಾಶಾ ಸೈಯದ್, ಶಾಸಕ ಆಸೀಫ್ ಸೀಟ್ ಅವರು ಅತ್ಯಂತ ಉತ್ತಮ ಕಾರ್ಯ ಮಾಡಿದ್ದು ಚಿಕಿತ್ಸೆ ಜೊತೆಗೆ ಉಚಿತ ಔಷಧಗಳನ್ನು ಕೊಟ್ಟಿದ್ದಾರೆ ಇಲ್ಲಿಯ ಜನರು ಅದರ ಸದುಪಯೋಗ ಪಡೆದುಕೊಂಡಿದ್ದಾರೆ ವೈದ್ಯಕೀಯ ಶಿಬಿರವು ಅತ್ಯಂತ ಯಶಸ್ವಿಯಾಗಿದೆ ಶಾಸಕರಿಗೆ ಧನ್ಯವಾದಗಳು ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಸಕರ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು