ಖಾನಾಪೂರ : ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ನಿಮಿತ್ಯ ಅವರ ಪೋಟೋ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಪ್ರಕಾಶ್ ಬೈಲೂರಕರ ಅವರು ಪಟ್ಟಣದ ನಾಗರೀಕರಿಗೆ ಮಹಾರಾಜರ ಜಯಂತ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಜಯಾ ಭುತಕಿ,ಸದಸ್ಯ ಪ್ರಕಾಶ್ ಬೈಲೂಲಕರ, ನಾರಾಯಣ ಓಗಲೆ, ವಿನೋದ್ ಪಾಟೀಲ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ವರ್ಗದವರಾದ ಪ್ರೇಮಾನಂದ ನಾಯ್ಕ, ಗಂಗಾಧರ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.