ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸೇರಬೇಕಾದ ರೇಷನ್ ಕಿಟ್ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಒಟ್ಟು 26 ಜನರನ್ನು ಬಂಧನ ಮಾಡಿ ಜೈಲಿಗೆ ಅಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ ಹೊರವಲಯದ ಗೋಡೌನ್ ನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸೇರಿದ ಅಕ್ಕಿ,ಬೆಳೆ,ಬೆಲ್ಲ,ರವೆ,ಹೆಸರುಕಾಳು ಸೇರಿದಂತೆ ಲಕ್ಷಾಂತರ ಮೌಲ್ಯದ ರೇಷನ್ ಕಿಟ್ ಗಳು ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸ್ಕ್ರ್ಯಾಪ್ ಗೋಡೌನ್’ನಲ್ಲಿ ಶೇಖರಿಸಿ ಇಟ್ಟ ಮಾಹಿತಿ ಅಧಿಕಾರಿಗಳು ದಾಳಿಯನ್ನು ಮಾಡಿದಾಗ ಸುಮಾರು 4 ಲಕ್ಷ ಮೌಲ್ಯದ ರೇಷನ್ ಕಿಟ್ ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಸ್ವತ್ತು ಕಳ್ಳತನ ಆಗಿರೋ ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದಾಗ ಸ್ಫೋಟಕ ಮಾಹಿತಿಗಳು ಪೊಲೀಸರಿಗೆ ಲಭ್ಯಬಾಗಿದೆ.
ಪ್ರಕರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 26 ಜನರನ್ನು ಬಂಧನ ಮಾಡಲಾಗಿದ್ದು ಇದೊಂದು ವ್ಯವಸ್ಥಿತ ಜಾಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಬತುಲ್ ಹಾಗೂ ಆಕೆಯ ಗಂಡ ಫಾರೂಕ್ ತಲೆ ಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಲಾಗಿದೆ ಅಂತಾ ಕಮೀಷನರ್ ಶಶಿಕುಮಾರ್ ಹೇಳಿದ್ದಾ
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿಗಳ ಸಂಖ್ಯೆ 26 ಕ್ಕೇ ಇದ್ದು ಇದಕ್ಕೆ ಇನ್ನು ಹೆಚ್ಚುವರಿಯಾಗಿ ಪ್ರಮುಖ ಆರೋಪಿಗಳು ಬಂಧನ ಮಾಡುವುದರಿಂದ ಆರೋಪಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು.ಇನ್ನು ಹಲವರು ಜೈಲು ಸೇರುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ.