Breaking News

ಜನದಟ್ಟಣೆ ಕಡಿಮೆಯಾಗಲಿ ನಾನು ಕೂಡ ಕುಂಭಮೇಳಕ್ಕೆ ಹೋಗುತ್ತೇ; ಸತೀಶ್ ಜಾರಕಿಹೊಳಿ

Spread the love

ಬೆಳಗಾವಿ; ಭಕ್ತಿ ವೈಯಕ್ತಿಕ ವಿಷಯ ಮತ್ತು ಭಕ್ತಿಯಿದ್ದವರು ಮಹಾಕುಂಭಕ್ಕೆ ಹೋಗುತ್ತಾರೆ. ಜನದಟ್ಟಣೆ ಕಡಿಮೆಯಾದ ನಂತರ ನಾನು ಕೂಡ ಕುಂಭಮೇಳಕ್ಕೆ ಹೋಗುತ್ತೇನೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಹಾಗೂ ಡಿಕೆಶಿ ಪುಣ್ಯಸ್ನಾನ ಮಾಡಿರೋದು ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ವರ್ಷನ್ ಅವರು ಹೇಳಿದ್ದಾರೆ, ಇವರ ವರ್ಷನ್ ಇವರು ಹೇಳಿದ್ದಾರೆ. ಖರ್ಗೆಯವರು ಹೇಳಿದ ತಕ್ಷಣ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಕುಂಭಮೇಳಕ್ಕೆ ಹೋಗುವವರು ಮುಕ್ತವಾಗಿದ್ದಾರೆ ಎಲ್ಲರೂ ಹೋಗುತ್ತಿದ್ದಾರೆ. ಇದರಲ್ಲಿ ಏನೂ ಗೊಂದಲ ಆಗುವುದಿಲ್ಲ ಎಂದು ಹೇಳಿದರು,

ಮಹಾಕುಂಭಮೇಳಕ್ಕೆ ಹೋಗುವುದು ಅವರವರ ಭಕ್ತಿ, ಭಕ್ತಿ ಇದ್ದವರು ಹೋಗಿಯೇ ಹೋಗುತ್ತಾರೆ. ಮಂಗಳೂರಿಂದಲೂ ರೈಲು ಹೊರಟಿದೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಕುಂಭಮೇಳಕ್ಕೆ ಹೊರಟಿದ್ದಾರೆ. ಜನದಟ್ಟಣೆ ಕಡಿಮೆಯಾಗಲಿ, ಆಮೇಲೆ ನಾನು ಹೋಗಿ ಬರುತ್ತೇನೆ. ಈಗ ಬಹಳ ಜನದಟ್ಟಣೆ ಇದೆ. ಮಂಗಳೂರಿನಿಂದ ಕುಂಭಮೇಳಕ್ಕೆ ಹೊರಟವರಲ್ಲಿ ಶೇ.50 ಕಾಂಗ್ರೆಸ್‌ನವರೇ ಇದ್ದಾರೆ. ಅದೇನು ಒಂದೇ ಪಕ್ಷಕ್ಕೆ ಸೀಮಿತವಾದ ಆಚರಣೆ ಅಲ್ಲ. ಯಾರ ಭಕ್ತಿಗೂ ನಾವು ಅಡ್ಡಿಪಡಿಸಲು ಹೋಗಲ್ಲ, ಇದು ಜನರ ಭಕ್ತಿ-ಪ್ರೀತಿ ವಿಶ್ವಾಸಕ್ಕೆ ಸಂಬಂಧಪಟ್ಟ ವಿಷಯ ಎಂದು ತಿಳಿಸಿದರು.


Spread the love

About Laxminews 24x7

Check Also

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.

Spread the love ಹುಕ್ಕೇರಿ : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ