ಉತ್ತರ ಪ್ರದೇಶದ: ತ್ರಿವೇಣಿ ಸಂಗಮದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಮಹಾ ಕುಂಭಮೇಳ ಇಡೀ ಜಗತ್ತಿನ ಗಮನ ಸೆಳೆದಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಈಗಾಗಲೇ 50 ಕೋಟಿ ಭಕ್ತರು ಬಂದು, ಪವಿತ್ರ ಸ್ನಾನ ಮಾಡಿದ್ದಾರೆ.
ಈ ಶುಭ ಘಳಿಗೆಯಲ್ಲೇ ಭಕ್ತನೊಬ್ಬ ತನ್ನ ಮೊಬೈಲ್ ಫೋನ್‌ಗೂ ಪವಿತ್ರ ಸ್ನಾನ ಮಾಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಹಿಂದೂಗಳ ಪವಿತ್ರ ಆಚರಣೆ ಆಗಿರುವ ಮಹಾ ಕುಂಭಮೇಳ ಪ್ರಪಂಚದ ಮೂಲೆ ಮೂಲೆಯಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ದೊಡ್ಡ ದೊಡ್ಡ ನಾಯಕರು ಕೂಡ ಕುಂಭಮೇಳಕ್ಕೆ ಬಂದು ಪವಿತ್ರ ಸ್ನಾನ ಮಾಡಿದ್ದಾರೆ. ಇಂತಹ ಸಮಯದಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನ್‌ನ ತ್ರಿವೇಣಿ ಸಂಗಮದಲ್ಲಿ ಮುಳುಗಿಸಿದ್ದು, ಪವಿತ್ರ ಸ್ನಾನ ಮಾಡಿಸಿದ್ದಾನೆ.
ತಾನು ಯಾವ ಕಾರಣಕ್ಕೆ ಮೊಬೈಲ್‌ಗೆ ಪವಿತ್ರ ಸ್ನಾನವನ್ನು ಮಾಡಿಸುತ್ತಿದ್ದೇನೆ ಎಂಬುದನ್ನು ಕೂಡ ವ್ಯಕ್ತಿ ಹೇಳಿದ್ದಾನೆ. ಮೊಬೈಲ್ ಪಾಪಗಳನ್ನು ಮಾಡಿದೆ ಮತ್ತು ಶುದ್ಧೀಕರಣದ ಅಗತ್ಯವಿದೆ ಎನ್ನುತ್ತಾ ನೇರವಾಗಿ ಮೊಬೈಲ್‌ನ ನದಿ ನೀರಿನಲ್ಲಿ ಮುಳುಗಿಸಿದ್ದಾನೆ ವ್ಯಕ್ತಿ. ಈ ವಿಡಿಯೋ ನೋಡಿದ ಜನರು ವೆರೈಟಿ ವೆರೈಟಿ ಕಮೆಂಟ್ಸ್ ಹಾಕುತ್ತಿದ್ದಾರೆ. ಇನ್ನೂ ಕೆಲವರು ಮೊಬೈಲ್‌ಗೆ ಏನೂ ಆಗಿಲ್ವಾ? ಎಂದು ಪ್ರಶ್ನೆ ಕೇಳುತ್ತಿದ್ದಾರೆ.