ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ನೀಡಲಾಗುವ ಒಂದು ರೀತಿಯ ಭತ್ಯೆಯೇ ತುಟ್ಟಿ ಭತ್ಯೆ.ತುಟ್ಟಿ ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಬದಲಾಯಿಸಲಾಗುತ್ತದೆ. ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI-IW) ಆಧರಿಸಿ ಜನವರಿ ಮತ್ತು ಜುಲೈನಲ್ಲಿ ಪರಿಷ್ಕೃತ ದರವನ್ನು ಜಾರಿಗೆ ತರಲಾಗುತ್ತದೆ.
ಇದೀಗ ಕೇಂದ್ರ ಸಕಾರಿ ನೌಕರರ ಡಿಎ ಶೇ.3 ರಷ್ಟು ಹೆಚ್ಚಳವಾಗಲಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಒಟ್ಟು ಡಿಎ ಮತ್ತು ಪಿಂಚಣಿದಾರರ ಡಿಎ ಪರಿಹಾರ ಶೇ.56 ಕ್ಕೆ ಹೆಚ್ಚಾಗುತ್ತದೆ.ಈ ಹೆಚ್ಚಳ ಜನವರಿಯಿಂದಲೇ ಜಾರಿಗೆ ಬರಲಿದೆ.
ಜನವರಿ 2025ರಲ್ಲಿ ತುಟ್ಟಿ ಭತ್ಯೆ 53% ರಿಂದ 56% ಕ್ಕೆ ಏರಿಕೆಯಾಗಲಿದೆ. ಈ ಹೆಚ್ಚಳ 47.58 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ದೊಡ್ಡ ಮಟ್ಟದ ಪರಿಹಾರ ಸಿಕ್ಕಿದ ಹಗೆ ಆಗುತ್ತದೆ.
18,000 ಮೂಲ ವೇತನ ಪಡೆಯುವ ನೌಕರರಿಗೆ ಮಾಸಿಕ ತುಟ್ಟಿ ಭತ್ಯೆ 9,540 ರೂಪಾಯಿಯಿಂದ 10,080 ರೂಪಾಯಿಗೆ ಏರಿಕೆಯಾಗಲಿದೆ.ಹೆಚ್ಚಿನ ಮೂಲ ವೇತನ ಹೊಂದಿರುವವರಿಗೆ ಇನ್ನೂ ಹೆಚ್ಚಳವಾಗಲಿದೆ.ಪಿಂಚಣಿದಾರರ ಪಿಂಚಣಿ ಹೆಚ್ಚಳಕ್ಕೂ ಇದು ಕಾರಣವಾಗಲಿದೆ.
ಈ ತುಟ್ಟಿ ಭತ್ಯೆ ಹೆಚ್ಚಳವು ಜನವರಿ 1, 2025 ರಿಂದಲೇ ಜಾರಿಗೆ ಬರುತ್ತದೆ. ಹಾಗಾಗಿ ನೌಕರರು ಮತ್ತು ಪಿಂಚಣಿದಾರರು ಜನವರಿ ಮತ್ತು ಫೆಬ್ರವರಿ ತಿಂಗಳ ಬಾಕಿ ತುಟ್ಟಿಭತ್ಯೆಯನ್ನು ಮಾರ್ಚ್ 2025 ರಲ್ಲಿ ಪರಿಷ್ಕೃತ ಪಾವತಿಗಳೊಂದಿಗೆ ಪಡೆಯುತ್ತಾರೆ.