ಬೆಳಗಾವಿ: ಪೀರಣವಾಡಿಯಲ್ಲಿ ತಲೆ ಎತ್ತುತ್ತಿದ್ದ ಅನಧಿಕೃತ ಲೇಔಟನ್ನು ಬುಡಾ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ತೆರುವುಗೊಳಿಸಿದರು.
ಬೆಳಗಾವಿಯ ಪೀರಣವಾಡಿಯಲ್ಲಿ ಸರ್ವೆ ನಂ 38 ಮತ್ತು 113 ರಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಾಣಗೊಂಡಿತ್ತು. ಇದನ್ನರಿತ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಆಯುಕ್ತರಾದ ಶಕೀಲ್ ಅಹ್ಮದ್, ಅಧಿಕಾರಿಗಳಾದ ಬಿ.ವ್ಹಿ. ಹಿರೇಮಠ, ಎಸ್.ಸಿ. ನಾಯ್ಕ್, ಶಿವಕುಮಾರ್, ಹನೀಫ್ ಅಥನಿ, ಬಾಳಿಗಡ್ಡಿ , ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅನಧಿಕೃತ ಲೇಔಟನ್ನು ತೆರುವುಗೊಳಿಸಿದರು.