ಬೆಳಗಾವಿ: ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರು ಎಂದಿಗೂ ಅಮರ. ಅವರ ಕುಟುಂಬಸ್ಥರೊಂದಿಗೆ ತಾವು ಸದಾ ಜೊತೆಯಾಗಿದ್ದೇವೆ ಎಂದು ಸಿ.ಎ.ಪಿ.ಎಫ್ ಡೆಪ್ಯೂಟಿ ಕಮಾಂಡೆಂಟ್ ಮನೀಷ್ ಕುಮಾರ್ ತಿಳಿಸಿದರು.
ಇಂದು ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಎಕ್ಸ್ ಸಿ.ಎ.ಪಿ.ಎಫ್ ವೆಲಫರ ಅಸೋಸಿಯೇಷನನ ವತಿಯಿಂದ ಬೆಳಗಾವಿಯಲ್ಲಿ ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾರ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾಜಿ ಸೈನಿಕರ ಸಂಘಟನೆಯ ಅಧ್ಯಕ್ಷರಾದ ಡಾ. ರವಿ ಪಾಟೀಲ್, ಸಾಮಾಜೀಕ ಕಾರ್ಯಕರ್ತ ಸುಭಾಷ್ ಪಾಟೀಲ್, ಮುರುಘೇಂದ್ರಗೌಡ ಪಾಟೀಲ್, ಸುರೇಶ್ ಯಾದವ್, ಸಿದ್ಧನಗೌಡ ಪಾಟೀಲ್ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎ.ಪಿ.ಎಫ್ ಡೆಪ್ಯೂಟಿ ಕಮಾಂಡೆಂಟ್ ಮನೀಷ್ ಕುಮಾರ್ ಅವರು ,ದೇಶಕ್ಕಾಗಿ ಸಿ.ಎ.ಪಿ.ಎಫ್ ಯೋಧರು ಪುಲ್ವಾಮಾದಲ್ಲಿ ಹುತಾತ್ಮರಾಗಿದ್ದಾರೆ. ಆದರೇ ತಮ್ಮ ಮನೆಯ ಸದಸ್ಯನನ್ನು ಕಳೆದುಕೊಂಡು ಆ ವೀರಯೋಧರ ಕುಟುಂಬಗಳು ಇಂದಿಗೂ ಅವರ ನೆನಪಿನೊಂದಿಗೆ ಜೀವಿಸುತ್ತಿವೆ. ಹುತಾತ್ಮ ಯೋಧರ ಕಾರ್ಯ ಎಂದಿಗೂ ಅಮರ. ದೇಶಕ್ಕಾಗಿ ಬಲಿಯಾದ ಹುತಾತ್ಮ ಯೋಧರ ಕುಟುಂಬಸ್ಥರೊಂದಿತೆ ತಾವು ಸದಾ ಜೊತೆಗಿದ್ದೇವೆ ಎಂದರು.
ಮಾಜಿ ಸೈನಿಕ ಅಶೋಕ ಅರ್ಜುನ ಪಾಟೀಲ ಅವರು ಪುಲ್ವಾಮಾ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ಧೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಎಕ್ಸ್ ಸಿ.ಎ.ಪಿ.ಎಫ್ ವೆಲಫರ ಅಸೋಸಿಯೇಷನನ ಅಧ್ಯಕ್ಷ ಅಮೃತ ಕೃಷ್ಣ ಸೋಲಾಪುರೆ ಅವರು ಪುಲ್ವಾಮಾದಲ್ಲಿ ನಡೆದ ಘಟನೆಯನ್ನು ವಿವರಿಸಿ ಹುತಾತ್ಮ ಯೋಧರ ಬಲಿದಾನವನ್ನು ಸ್ಮರಿಸಿದರು.
ಇನ್ನು ಮಹಾಂತೇಶ ವಕ್ಕುಂದ ಅವರು ಯೋಧರ ತ್ಯಾಗ ಬಲಿದಾನವನ್ನು ಭರಿಸಲು ಸಾಧ್ಯವಿಲ್ಲ. ಹಲವಾರು ತಾಯಂದಿರು ತಮ್ಮ ಮಕ್ಕಳನ್ನು ಈ ಭೂತಾಯಿಯ ರಕ್ಷಣೆಗೆ ಸಮರ್ಪಿಸಿದ್ದಾರೆ. ಅವರ ತ್ಯಾಗ ಬಲಿದಾನ ಎಂದು ಅಮರ. ಗಡಿಯಲ್ಲಿ ದೇಶ ಸೇವೆಯನ್ನು ಸಲ್ಲಿಸಿ ಈಗ ನಾಡಿನ ಸೇವೆಯಲ್ಲಿ ತೊಡಗಿಕೊಂಡಿರುವ ನಿವೃತ್ತ ಯೋಧರ ಕಾರ್ಯ ಅಮೂಲ್ಯ ಎಂದರು.
ನಂತರ ಸಾಂಸ್ಕೃತೀಕ ಕಾರ್ಯಕ್ರಮಗಳು ನಡೆದವು. ವಿಜೇತರಿಗೆ ಗಣ್ಯರ ಹಸ್ತದಿಂದ ಬಹುಮಾನವನ್ನು ವಿತರಿಸಲಾಯಿತು.ಈ ವೇಳೆ ವಿವಿಧ ಗಣ್ಯರು ಮತ್ತು ಮಾಜಿ ಸೈನಿಕರು ಭಾಗಿಯಾಗಿದ್ಧರು.