Breaking News

ಗರಗ ಜಾತ್ರೆಯ ಪ್ರಯುಕ್ತ ಫೆ.14-18 ವರೆಗೆ ಮಧ್ಯ ಮಾರಾಟ, ಸಾಗಟಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ದಿವ್ಯಪ್ರಭು

Spread the love

ಧಾರವಾಡ: ಇದೇ ಫೆ.14 ರಿಂದ 18ವರೆಗೆ ಜರುಗಲಿರುವ ಗರಗ ಜಾತ್ರೆಯ ಪ್ರಯುಕ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಅಬಕಾರಿ ಕಾಯ್ದೆ, 1965 ರ ಕಲಂ 21(1)ರ ಪ್ರದತ್ತವಾದ ಅಧಿಕಾರದ ಮೇರೆಗೆ, ಗರಗ ಸೇರಿ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಮಧ್ಯ ಮಾರಾಟ ಜೆತೆಗೆ ಸಾಗಟಕ್ಕೆ ನಿರ್ಬಂಧ ಹಾಕಿ‌ ಜಿಲ್ಲಾಧಿಕಾರಿ ದಿವ್ಯಪ್ರಭುರವರು ಆದೇಶ ಹೊರಡಿಸಿದ್ದಾರೆ.

ಈ ಕುರಿತು ಇಂದು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲ್ಲೂಕಿನ ಬೇಲೂರು, ಗರಗ, ಉಪ್ಪಿನಬೆಟಗೇರಿ, ತೇಗೂರು ಗ್ರಾಮಗಳಲ್ಲಿ (ಗರಗ ಜಾತ್ರೆಯ ದಿನಗಳಂದು) ಫೆ.14ರ ಬೆಳಿಗ್ಗೆ 6 ಗಂಟೆಯಿಂದ ಫೆ.18ರ ರಾತ್ರಿ 10 ಗಂಟೆಯವರೆಗೆ ಮದ್ಯಪಾನ, ಮದ್ಯ ಮಾರಾಟ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಿಲಾಗಿದೆ.

ಈ ಅವಧಿಯಲ್ಲಿ ಧಾರವಾಡ ತಾಲ್ಲೂಕಿನ ಬೇಲೂರು, ಗರಗ, ಉಪ್ಪಿನಬೆಟಗೇರಿ, ತೇಗೂರು ಗ್ರಾಮಗಳಲ್ಲಿ ಯಾವತ್ತೂ ಭಾರತೀಯ ತಯಾರಿಕೆ ಮದ್ಯದ ಅಂಗಡಿಗಳು, ಬೀಯರ್‌-ಬಾರ್‌ಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೊಗಳನ್ನು ಮುಚ್ಚತಕ್ಕದ್ದು. ಇದಲ್ಲದೇ ಪರಿಸ್ಥಿತಿ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ವಲಯ ಅಬಕಾರಿ ಇನಸ್ಪೆಕ್ಟರ್‌ ಹಾಗೂ ಉಪವಿಭಾಗದ ಅಬಕಾರಿ ಅಧೀಕ್ಷಕರು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 (2) ರ ಅವಶ್ಯಕತೆ ಕಂಡುಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ಅವರು ನಿರ್ದೇಶಿಸಿದ್ದಾರೆ.

ಅಬಕಾರಿ ಉಪ ಆಯುಕ್ತರು, ಧಾರವಾಡ, ಮತ್ತು ಆರಕ್ಷಕ ಅಧೀಕ್ಷಕರು ಧಾರವಾಡ, ಹೆಚ್ಚುವರಿ ಅಬಕಾರಿ ಅಧೀಕ್ಷಕರು, ಧಾರವಾಡ ಮತ್ತು ಅಬಕಾರಿ ಉಪ ಅಧೀಕ್ಷಕರು, (ವಿಚಕ್ಷಕ ದಳ) ಹುಬ್ಬಳ್ಳಿ ಇವರುಗಳು ತಮ್ಮ ವ್ಯಾಪ್ತಿಯಲ್ಲಿ ಇಂದು (ಫೆ.13) ಹೊರಡಿಸಲಾದ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕೆಂದು ಅವರು ತಿಳಿಸಿದ್ದಾರೆ.

 


Spread the love

About Laxminews 24x7

Check Also

ಕುರಿ ಸಾಕಾಣಿಕೆ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್. 78 ಕುರಿಗಳು ಸಜೀವ ದಹನ

Spread the love ಮುಂಡಗೋಡ: ಪಟ್ಟಣದ ಹೊರವಲಯದ ತೋಟವೊಂದರಲ್ಲಿ ಕುರಿ ಸಾಕಾಣಿಕೆ ಘಟಕಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ