ಯುವ ಅಧ್ಯಕ್ಷ ಉಮೇಶ ಪಾಟೀಲರಿಗೆ ಸತ್ಕರಿಸಿದ ಮುಖಂಡ ಸಂದೀಪ ರೆಡ್ಡಿ
ಕಾಗವಾಡ:ನೂತನವಾಗಿ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ ಪಾಟೀಲ್ ಅವರಿಗೆ ಯುವ ಮುಖಂಡರಾದ ಸಂದೀಪ ರೆಡ್ಡಿ ಶಾಲು ಹೊದಿಸಿ ಹಾರ ಹಾಕಿ ಸತ್ಕರಿಸಿದರು.
ನಂತರ ಸತ್ಕರಿಸಿ ಮಾತನಾಡಿದ ಅವರು,ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಹಗಲಿರುಳು ಶ್ರಮಿಸಿ ಪಕ್ಷ ಬಲಪಡಿಸುವಲ್ಲಿ ಕಾರಣೀಕರ್ತರಾಗಿದ್ದರಿಂದ ಇವತ್ತು ಕಾಗವಾಡ ತಾಲ್ಲೂಕಾ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನ ಸಿಕ್ಕಿರುವದು ಸಂತಸ ತಂದಿದೆ.ನಿಮ್ಮ ರಾಜಕೀಯ ಭವಿಷ್ಯ ಹೀಗೆ ಉಜ್ವಲವಾಗಲಿ ಎಂದು ಹಾರೈಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ಯುವ ಬ್ಲಾಕ್ ಅಧ್ಯಕ್ಷ ಉಮೇಶ ಪಾಟೀಲ್,ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನ ಇವತ್ತು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.ಇದಕ್ಕಾಗಿ ಶ್ರಮಿಸಿದ ನನ್ನೆಲ್ಲ ಯುವ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.
ಈ ವೇಳೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಯುವ ಮುಖಂಡರಾದ ಸಂದೀಪ ರೆಡ್ಡಿ ಅನಂತಪೂರ ಬ್ಲಾಕ್ ಯುವ ಮುಖಂಡರಾದ ಅಬಕರ ಮುಲ್ಲಾ ಉಪಸ್ಥಿತಿ ಇದ್ದರು.